ವೀರಂ ಸಿನಿಮಾ ಏ.7ಕ್ಕೆ ರಾಜಾದ್ಯಂತ ಬಿಡುಗಡೆ

ದಾವಣಗೆರೆ.ಮಾ.೨೯: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ, ಅದರಲ್ಲೂ ಮಾಸ್ ಗೆಟಪಿನಲ್ಲಿ ಕಾಣಿಸಿಕೊಂಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ, ಶ್ರೀನಗರ ಕಿಟ್ಟಿ  ನಟಿಸಿರುವ ವೀರಂ ಚಿತ್ರ ಇದೇ ಏಪ್ರಿಲ್ 7ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಕೆ.ಎಂ.ಶಶಿಧರ್ ಹಾಗೂ ನಿರ್ದೇಶಕ ಖದರ್ ಕುಮಾರ್ ತಿಳಿಸಿದರು.ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಂ. ಶಶಿಧರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಸೇರಿದಂತೆ ಇನ್ನೂ ಹಲವಾರು ಸಿನಿಮಾ ತಾರೆಯರು ನಡೆಸಿದ್ದು, ಇದೇ 7ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಸಿನಿಮಾ ಬಿಡುಗಡೆಯ ಮುನ್ನ ಪ್ರಚಾರಕ್ಕಾಗಿ ಆಗಮಿಸಿದ್ದೇವೆ ಎಂದು ಮಾಹಿತಿ ನೀಡಿದರು.ಪ್ರಜ್ವಲ್​ ದೇವರಾಜ್​ ಈವರೆಗೂ ಲವರ್​ ಬಾಯ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಹೆಚ್ಚು. ಪೊಲೀಸ್​ ಪಾತ್ರ ಮಾಡಿ ರಂಜಿಸಿದ್ದೂ ಉಂಟು. ಆದರೆ ವೀರಂ ಸಿನಿಮಾದಲ್ಲಿ ಅವರ ಗೆಟಪ್​ ಸಂಪೂರ್ಣ ಬದಲಾಗಿದೆ. ಸಿಕ್ಕಾಪಟ್ಟೆ ಮಾಸ್ ಲುಕ್ ನಲ್ಲಿ  ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳೂ ಈ ಸಿನಿಮಾದಲ್ಲಿ ಇವೆ. ಈ ಎಲ್ಲ ಕಾರಣಗಳಿಂದಾಗಿ ವೀರಂ ಚಿತ್ರ ನಿರೀಕ್ಷೆ ಮೂಡಿಸಿದೆ ಎಂದು ಮಾಹಿತಿ ನೀಡಿದರು.ಲವಿತ್​ ಛಾಯಾಗ್ರಹಣ, ಅನೂಪ್​ ಸಿಳೀನ್​ ಸಂಗೀತ ನಿರ್ದೇಶನ, ರವಿಚಂದ್ರನ್​ ಸಂಕಲನ, ಡಿಫರೆಂಡ್​ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಕಳೆದ ವರ್ಷವೇ ವೀರಂ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊವಿಡ್​ ಮುಂತಾದ ಕಾರಣಗಳಿಂದಾಗಿ ರಿಲೀಸ್​ ದಿನಾಂಕ ಮುಂದೂಡುವುದು ಅನಿವಾರ್ಯ ಆಯಿತು. ಈಗ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದ್ದೂರಿಯಾಗಿ ರಿಲೀಸ್​ ಮಾಡಲು ಸಕಲ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಪ್ರಜ್ವಲ್ ದೇವರಾಜ್, ಶ್ರೀನಗರ ಕಿಟ್ಟಿ, ಗಿರೀಶ್, ಶಿಷ್ಯ ದೀಪಕ್ ಇತರರು ಇದ್ದರು.