ವೀಡಿಯೋ ವೈರಲ್ ಬಯಲಿಗೆ ಬಿದ್ದ ಕಾಂಗ್ರೆಸ್ ಒಳ ಜಗಳ

ಬಳ್ಳಾರಿ ಏ 25 : ಕಾಂಗ್ರೆಸ್ ನ 32 ವಾರ್ಡಿನಲ್ಲಿ ಕಾಂಗ್ರೆಸ್‍ನ ಒಳ ಜಗಳ ಈಗ ಬಹಿರಂಗಗೊಂಡಿದೆ. ಅಲ್ಲಿ ಕಾಂಗ್ರೆಸ್ ಮುಖಂಡರೇ ಪಕ್ಷೇತರ ಅಭ್ಯರ್ಥಿಪರ ಪ್ರಚಾಋ ನಡೆಸಿದ್ದಾರೆ.
ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರ ಸಬಂಧಿ ಎರ್ರಿಸ್ವಾಮಿ ಅವರು ಕೌಲ್ ಬಜಾರ್ ಪ್ರದೇಶ ಇತರೇ ವಾರ್ಡುಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಅವರು. 32 ನೇ ವಾರ್ಡಿನಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಚಾಮುಂಡೇಶ್ವರಿ ನಾಗರಾಜ್ ಪರವಾಗಿ ಪ್ರಚಾರ ಮಾಡದೇ. ಪಕ್ಷೇತರ ಅಭ್ಯರ್ಥಿ ಉಮಾಪತಿ ರವರ ಪತ್ನಿಯ ಪರವಾಗಿ ಗ್ಯಾಸ್ ಸಿಲಿಂಡರ್‍ಗೆ ಓಟು ಹಾಕಿ ಎಂದು ಪ್ರಚಾರ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಇದರಿಂದಾಗಿ ಕಾಂಗ್ರೆಸ್‍ನ ಆಂತರಿಕ ಒಳ ಜಗಳ ಬಯಲಿಗೆ ಬಂದಂತಾಗಿದೆ.