ವೀಕ್ಷಕರ ಆಗಮನ


ಧಾರವಾಡ,ಏ.19: ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗವು, 11-ಧಾರವಾಡ ಲೋಕಸಭೆ ಮತಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರನ್ನಾಗಿ ಅಜಯ ಗುಪ್ತಾ ಅವರನ್ನು ಮತ್ತು ಪೆÇಲೀಸ್ ವೀಕ್ಷಕರನ್ನಾಗಿ ಭನ್ವರ ಲಾಲ ಮೀನಾ ಅವರನ್ನು ನೇಮಕ ಮಾಡಿ, ಆದೇಶಿಸಿದೆ.
ಇಬ್ಬರು ವೀಕ್ಷಕರು ಧಾರವಾಡ ಜಿಲ್ಲೆಗೆ ಆಗಮಿಸಿದ್ದು, ಚುನಾವಣೆಗೆ ಸಂಬಂದಿಸಿದ ದೂರುಗಳಿದ್ದಲ್ಲಿ, ಸಾರ್ವಜನಿಕರ ಭೇಟಿಗೆ ನಿಗದಿತ ಅವಧಿಗೆ ಅವಕಾಶ ನೀಡಿದ್ದಾರೆ.
11-ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ನೇಮಕವಾಗಿರುವ ಅಜಯ ಗುಪ್ತಾ ಅವರು ಹುಬ್ಬಳ್ಳಿಯ ಮೇನ್ ಸಕ್ರ್ಯೂಟ್ ಹೌಸ್, ವಿವಿಐಪಿ ರೂಮ್ ನಂ-02 ರಲ್ಲಿ ವಾಸವಿದ್ದಾರೆ. ಅವರನ್ನು ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯ ವರೆಗೆ ಹುಬ್ಬಳ್ಳಿಯ ಮೇನ್ ಸಕ್ರ್ಯೂಟ್ ಹೌಸ್, ವಿವಿಐಪಿ ರೂಮ್ ನಂ-02 ರಲ್ಲಿ ಸಾರ್ವಜನಿಕರು ಭೇಟಿ ಮಾಡಿ, ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ದೂರುಗಳಿದ್ದಲ್ಲಿ ಸಲ್ಲಿಸಬಹುದು. ಮತ್ತು ಇ-ಮೇಲ್: go11ಜhಚಿಡಿತಿಚಿಜಠಿಛಿ2024@gmಚಿiಟ.ಛಿom ಹಾಗೂ ಪ್ಯಾಕ್ಸ್: 0836-2000642, ಮೊಬೈಲ್: 9141056509 ಗೂ ಸಂಪರ್ಕಿಸಬಹುದು.
11-ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣಾ ಪೆÇಲೀಸ್ ವೀಕ್ಷಕರಾಗಿ ನೇಮಕವಾಗಿರುವ ಭನ್ವರ ಲಾಲ ಮೀನಾ ಅವರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದ ಅಂತರಾಷ್ಟ್ರೀಯ ಅತಿಥಿಗೃಹ ಶಾಲ್ಮಲಾದಲ್ಲಿ ವಾಸವಿದ್ದಾರೆ. ಅವರನ್ನು ಕೃಷಿ ವಿಶ್ವವಿದ್ಯಾಲಯ ಆವರಣದ ಅಂತರಾಷ್ಟ್ರೀಯ ಅತಿಥಿಗೃಹ ಶಾಲ್ಮಲಾದಲ್ಲಿ ದಿನ ಬಿಟ್ಟು ದಿನ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಿ, ತಮ್ಮ ದೂರುಗಳಿದ್ದಲ್ಲಿ ಅವರಿಗೆ ಸಲ್ಲಿಸಬಹುದು. ಮತ್ತು ಇ-ಮೇಲ್: ಠಿo11ಜhಚಿಡಿತಿಚಿಜಠಿಛಿ2024@gmಚಿiಟ.ಛಿom ಹಾಗೂ ಪ್ಯಾಕ್ಸ್: 0836-2445537, ಮೊಬೈಲ್: 9141056510 ಗೂ ಸಂಪರ್ಕಿಸಬಹುದು ಎಂದು ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.