ವೀಕೆಂಡ ಕಫ್ರ್ಯೂ ಅಗರಖೇಡ ಸಂಪೂರ್ಣ ಬಂದ್

(ಸಂಜೆವಾಣಿ ವಾರ್ತೆ)
ಇಂಡಿ:ಎ.26: ತಾಲೂಕಿನ ಅಗರಖೇಡ ಗ್ರಾಮದಲ್ಲಿ ಸರಕಾರದ ನಿಯಮಾವಳಿ ಪ್ರಕಾರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಣ್ಣ ರೂಗಿ ಅವರ ಆದೇಶದ ಮೇರೆಗೆ ಗ್ರಾಮ ಪಂಚಾಯತಿ ಸಿಬ್ಬಂದಿ ಸುಭಾಸ ಸಿಂಧೆ ಅವರ ನೆತ್ರತ್ವದಲ್ಲಿ ಡಂಗುರ ಸಾರಿ ಜನರಿಗೆ ಕೋವಿಡ-19 ಎರಡನೇ ಅಲೆ ಹೆಚ್ಚಾಗಿರವ ಕಾರಣ ರಾಜ್ಯದಾಂತ ಸುಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು(ವಾರಾಂತ್ಯ ಕಫ್ರ್ಯೂ) ವಾರದ ಕೊನೆಯ ದಿನವಾದ ಶನಿವಾರ, ರವಿವಾರ ಕಫ್ರ್ಯೂ ವಿಧಿಸಿದ ರಿಂದ ಜನದಟ್ಟಣೆಯನ್ನು ಕಡಿಮೆಮಾಡುವ ದ್ರಿಷ್ಠಿಯಿಂದ ಗ್ರಾಮದ ಎಲ್ಲ ಅಂಗಡಿ-ಮುಗ್ಗಟು,್ಟ ವ್ಯಾಪಾರ-ವೈವಾಟು, ಸಂಪೂರ್ಣ ಬಂದಮಾಡಲಾಗಿತ್ತು.
ಬಂದ್ ಯಶಸ್ವಿಯಾಗಲು ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಸಿಬ್ಬಂದಿವರ್ಗ, ಹೂರ ಪೊಲೀಸ ಠಾಣೆ ಹವಾಲ್ದಾರ ನಾಗರಾಜ ಜವೂರ, ಪೊಲೀಸ ಸಿಬ್ಬಂದಿ ಸಂಧೀಪ ಶಿವುಣಗಿ, ಎಮ್,ಎಸ್ ಕುಡಿಗನೂರ, ರಸೂಲ ಕುಂಬಾರ ಸಹಕಾರದಿಂದ ಹಾಗೂ ಜಿಲ್ಲಾ ಪಂಚಾಯತ ಸದಸ್ಯರು ಹಣಮಂತ ಖಂಡೇಕರ, ತಾಲೂಕಾ ಪಂಚಾಯತ ಅಧ್ಯಕ್ಷ ಅಣ್ಣರಾಯ ಬಿದರಕೋಟಿ, ಹಾಗೂ ಗ್ರಾಮದ ಹಿರಿಯರು ಮಲ್ಲಣ್ಣಸಹುಕಾರ ತೋಳನೂರ, ಲಕ್ಷ್ಮಣ ಸಾವಳಗಿ, ಗೌಡಪ್ಪಗೌಡ ಪಾಟೀಲ, ನಾಮದೇವ ಕೊಳೆಕ, ವಿಠ್ಠಲಗೌಡ ಪಾಟೀಲ ಅಧ್ಯಕ್ಷರು ಕೃ,ಪ,ಸ,ಸ,ನಿ. ಭೀಮುಗೌಡ ಪಾಟೀಲ, ಹುಸೇನಿ ಕಾಣಿ, ಸತ್ಯಪ್ಪ ಕೌಲಗಿ, ಶಂಕರ ಮೆಲಿನಕೇರಿ, ಇನ್ನೂ ಹಲವಾರು ಜನರ ಸಹಕಾರದಿಂದ ಅಗರಖೇಡ ಗ್ರಾಮವು ಸಂಪೂರ್ಣ ಬಂದ್ ಮಾಡಲು ಯಶಸ್ವಿಯಾಯಿತು.