ವೀಕೆಂಡ್ ವಿಥ್ ರಮೇಶ್ ಐದನೇ ಆವೃತ್ತಿಗೆ ಮುಹೂರ್ತ

ನಟ,ನಿರೂಪಕ ರಮೇಶ್ ಅರವಿಂದ್ ನಿರೂಪಣೆ ಮಾಡುತ್ತಿರುವ ” ವೀಕೆಂಡ್ ವಿಥ್ ರಮೇಶ್”  ಮತ್ತೆ ಬಂದಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಪ್ರತಿ ರಾತ್ರಿ 9 ಗಂಟೆಗೆ ನಾಡಿನ ವಿವಿಧ ಕ್ಷೇತ್ರದ ಸಾಧಕರ ಸಾಧನೆ ಅನಾವರಣ ಮಾಡುವ ಜೊತೆಗೆ ಅವರ ಜೀವನನ್ನು ಅವರಿಗೇ ತೋರಿಸುವ ಅಪರೂಪದ ಕಾರ್ಯಕ್ರಮ.

ನಾಳೆಯಿಂದ ಐದನೇ ಆವೃತ್ತಿ ಒಂದಷ್ಟು ವಿಭಿನ್ನತೆ ಮತ್ತು ವಿಶೇಷತೆಯೊಂದಿಗೆ ಪ್ರಸಾರ ಕಾಣಲು ಸಜ್ಜಾಗಿದೆ.ವೀಕ್ಷಕರಿಗೆ ಸ್ಪೂರ್ತಿಯಾಗುವ  ವಿವಿಧ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದ್ದು ಅವರು ಸಾಧಿಸಿದ  ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ .

ನಟ ನಿರೂಪಕ ರಮೇಶ್ ಅರವಿಂದ್ ಮಾಹಿತಿ ನೀಡಿ, 84 ಸಾಧಕ ಕಥೆಯನ್ನು ಹೇಳಿದ್ದೇನೆ. 16 ಜನ ಸಾದಕ ಕಥೆ ಕೇಳಿದರೆ ನಾನಂತೂ ಶತಕ ಬಾರಿಸುವ ಉತ್ಸಾಹದಲ್ಲಿದ್ದೇನೆ. ಕಥೆ ಹೇಳುವ ಜೊತೆಗೆ ಅವರ ಬುದುಕಿನ ಒಡನಾಟ ಒಂದು ಕಡೆ ನೂರು ಚಿತ್ರಗಳಲ್ಲಿ ನಟಿಸುವ ಅವಕಾಶ ಮತ್ತೊಂದೊಡೆಗೆ ಸಾಧಕರ ಮಾತು ಕೇಳಿದರೆ ನನ್ನ ರೀತಿ ಇದೆಯೆಲ್ಲಾ ಅನ್ನಿಸಲಿದೆ. ಸೂಪರ್ ಸ್ಟಾರ್ ಅಂದುಕೊಂಡಿದ್ದೆ.ಸರಳವಾಗಿದ್ಧಾರೆ ಅನ್ನಿಸದೇ ಇರದು.ಸಾಧಕರ ಕಥೆ ಹೇಳುವ ಮೂಲಕ ಸ್ಪೂರ್ತಿಯಾಗುವ ಕಥೆ.ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕ್ಷಣ ನಮ್ಮದು ಎಂದರು

ಜೀ ಕನ್ನಡ ಮುಖ್ಯ ಕಂಟೆಂಟ್ ಅಫೀಸರ್ ರಾಘವೇಂದ್ರ  ಹುಣಸೂರು,ವೀಕೆಂಡ್ ವಿಥ್ ಕಾರ್ಯಕ್ರಮ ಮಾಡುವಾಗ ಭಯ ಜವಾಬ್ದಾರಿ ಹೆಚ್ಚಿದೆ. ಕಳೆದ ನಾಲ್ಕು ಸರಣಿಯಲ್ಲಿ 84 ಸಾಧಕರನ್ನು 110 ಸಂಚಿಕೆಗಳ ಮೂಲಕ ನಾಡಿಗೆ ಪರಿಚಯದ ಮೂಲಕ ಬದುಕಿನ ಸತ್ಯಗಳನ್ನು ಅನಾವರಣ ಮಾಡಲಾಗಿದೆ.ದೊಡ್ಡದಾಗಿ ಸೆಟ್ ಹಾಕಲಾಗಿದೆ.ಈ ಬಾರಿ ಯುವ ಸಾಧಕರನ್ನು ಕರೆ ತರುವ ಕೆಲಸ ಮಾಡಲಾಗುವುದು ಎಂದರು. ಮಾರುಕಟ್ಟೆ ಮುಖ್ಯಸ್ಥ ರಾಘವನ್ ಮಾಹಿತಿ ಹಂಚಿಕೊಂಡು ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು.

ಮೊದಲ ಎಪಿಸೋಡ್‍ನಲ್ಲಿ ರಮ್ಯಾ

ಈ ಬಾರಿ ಮೊದಲ ಸೀಸನ್‍ನಲ್ಲಿ ಮೋಹಕ ತಾರೆ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ. ಪ್ರಭುದೇವ ,ಧೃವ ಸರ್ಜಾ, ಮಾಲಾಶ್ರೀ ರಚಿತಾ ರಾಮ್, ಜಗ್ಗಿ ವಾಸುದೇವ್ ಸೇರಿದಂತೆ  ಅನೇಕರನ್ನು ಕರೆ ತರುವ ಪ್ರಯತ್ನ ಮಾಡಿದೆ ವೀಕೆಂಡ್ ವಿಥ್ ರಮೇಶ್ ತಂಡ.