ವೀಕೆಂಡ್ ಲಾಕ್ ಡೌನ್. ಬೀದಿಗಿಳಿದ ಡಿವೈಎಸ್ ಪಿ, ಸಿಪಿಐ – ಸಂಪೂರ್ಣ ಸಫಲ.

ಕೂಡ್ಲಿಗಿ.ಏ. 24 :- ದಿನೇ ದಿನೇ ಕೋವಿಡ್ ಮಹಾಮಾರಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಲಾಕ್ ಡೌನ್ ನಿಯಮ ಜಾರಿಗೆ ತಂದಿರುವುದರಿಂದ ಇಂದು ಬೆಳಿಗ್ಗೆ ಜನರ ಓಡಾಟವನ್ನು ನಿಲ್ಲಿಸಿ ಮನೆಯಲ್ಲಿದ್ದು ಕೋವಿಡ್ ನಿಯಂತ್ರಣಗೊಳಿಸಲು ಸಹಕರಿಸಿ ಎಂದು ಜನತೆಗೆ ತಿಳಿಹೇಳುವ ಮೂಲಕ ಕೂಡ್ಲಿಗಿ ಡಿವೈಎಸ್ ಪಿ ಹರೀಶ ರೆಡ್ಡಿ ಮತ್ತು ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ತಮ್ಮ ಸಿಬ್ಬಂದಿಯೊಂದಿಗೆ ಬೀದಿಗಿಳಿದು ವೀಕೆಂಡ್ ಲಾಕ್ ಡೌನ್ ಸಫಲಗೊಳಿಸಿದರು.
ಪಟ್ಟಣದಲ್ಲಿ ಬೆಳಿಗ್ಗೆ 10 ಗಂಟೆವರೆಗೆ ತರಕಾರಿ ದಿನಸಿ ಅಂಗಡಿ ಹಣ್ಣು ಹೂ ಗಳ ಮಾರಾಟಕ್ಕೆ ಸ್ವಲ್ಪ ಕಾಲಾವಕಾಶ ನೀಡಿತ್ತು 10 ಗಂಟೆಯಾಗುತ್ತಿದ್ದಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸೇರಿದಂತೆ ಪ್ರಭಾರಿ ಆರೋಗ್ಯ ನಿರೀಕ್ಷಕ ರಾಜಾಭಕ್ಷಿ, ಮೇಸ್ತ್ರೀ ಪರಶುರಾಮ ಸೇರಿದಂತೆ ಪಟ್ಟಣದ ಪೊಲೀಸ್ ಠಾಣಾ ಸಿಬ್ಬಂದಿ ಅವುಗಳನ್ನು ಬಂದ್ ಮಾಡಿಸಿ ಅಲ್ಲಲ್ಲಿ ಬೈಕಲ್ಲಿ ಓಡಾಡುತ್ತಿದ್ದ ಜನರಿಗೆ ಲಾಠಿ ತೋರಿಸುವ ಮೂಲಕ ಜನರ ಓಡಾಟ ನಿಯಂತ್ರಿಸಿದರು ಇದರಿಂದ ಕೂಡ್ಲಿಗಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಪೂರ್ಣ ವೀಕೆಂಡ್ ಲಾಕ್ ಡೌನ್ ಗೆ ಜನರು ಮತ್ತು ಅಂಗಡಿ ಮುಂಗಟ್ಟು ಮಾಲೀಕರು ಸಹಕಾರ ನೀಡಿದ್ದಾರೆ. ಜನರಿಲ್ಲದೆ ಖಾಲಿ ಓಡಾಡುತ್ತಿದ್ದ ಸಾರಿಗೆ ಬಸ್ಸುಗಳು : ವೀಕೆಂಡ್ ಲಾಕ್ ಡೌನ್ ಇರುವುದರಿಂದ ಓಡಾಡದ ಜನ ಇತ್ತ ಸಾರಿಗೆ ವ್ಯವಸ್ಥೆ ಇದ್ದು ಪ್ರಯಾಣಿಕರಿಲ್ಲದೆ ಕೆಲವೇ ಕೆಲವು ಬೆರಳಣಿಕೆ ಜನರನ್ನು ಕರೆದುಕೊಂಡು ಹೋಗುವ ಬಸ್ಸುಗಳು ಕಾಣುತ್ತಿದ್ದವು.