“ವೀಕೆಂಡ್ ಲಾಕ್‍ಡೌನ್’’ ಮಾನವೀಯತೆ ಮೆರೆದ ಗೃಹರಕ್ಷಕರಿಂದ ಆಹಾರ

ಹೊಸಪೇಟೆ ಏ24: ವೀಕೆಂಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ಹಂಪಿ ಸ್ತಭ್ಧವಾಗಿದೆ. ಪ್ರವಾಸಿಗರಿಲ್ಲದೆ ಹಂಪಿ ಪ್ರವಾಸಿಗರನ್ನೆ ನಂಬಿರುವ ವಾನರಸೇನೆ(ಕೋತಿಗಳು) ಕಂಗಾಲಾಗಿರುವಾಗ ಕ್ಷೇತ್ರದಲ್ಲಿ ರಕ್ಷಣೆಗೆಂದೆ ನಿಯೋಜನೆಗೊಂಡ ಗೃಹರಕ್ಷಕ ಸಿಬ್ಬಂದಿಗಳು ಮಾನವೀಯತೆ ಮೆರೆಯುವ ಮೂಲಕ ಕೋತಿಗಳಿಗೆ ಆಹಾರ ವಿತರಿಸುತ್ತಿದ್ದಾರೆ.
ಈಗಾಗಲೇ ಅನೇಕ ದಿನಗಳಿಂದ ಭಕ್ತರ ಪ್ರವೇಶಕ್ಕೆ ನಿರ್ಭಂದ ವಿಧಿಸಿದ ಹಿನ್ನೆಲೆಯಲ್ಲಿ ಒಂದು ರೀತಿಯ ತೊಂದರೆಯಲ್ಲಿದ್ದು ಕೋತಿಗಳು ವೀಕೆಂಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮತ್ತಷ್ಟು ಕಂಗಾಲಿದ್ದ ಕೋತಿಗಳಿಗೆ ಗೊನೆ ಗೊನೆ ಬಾಳೆ ಹಣ್ಣುಗಳನ್ನು ತಂದು ವಿತರಿಸುವ ಮೂಲಕ ಅವುಗಳ ದಾಹ ತೀರಿಸಲು ಮುಂದಾಗಿದ್ದಾರೆ.
ಪ್ರವಾಸಿ ಮಿತ್ರ ಸಿಬ್ಬಂದಿಗಳಾದ ಹೆಚ್.ಸಿದ್ದಪ್ಪ, ಪಿ.ಬಾಷಾಸಾಬ್, ಬಿ.ಗಂಗಾಧರ, ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ಶ್ರೀಧರ ಸೇರಿದಂತೆ ಅನೇಕರು ಹಸಿದು ಬಳಲುತ್ತಿದ್ದ ವಾನರರಿಗೆ (ಕೋತಿ) ಬಾಳೆ ಹಣ್ಣು ಹಾಗೂ ಬಿಸ್ಕತ್‍ಗಳನ್ನು ವಿತರಿಸುವ ಮೂಲಕ ದಾಹ ತಣಿಸಿದರು.