ವೀಕೆಂಡ್ ಕರ್ಫ್ಯೂ ಜಾರಿಯಾದರೂ ನಿಂತಿಲ್ಲ ಜನರ ಓಡಾಟ

ರಾಯಚೂರು.ಏ.೨೪-ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸೋಂಕನ್ನು ತಡೆಗಟ್ಟಲು ಶುಕ್ರವಾರ ರಾತ್ರಿ ೯ ರಿಂದಲೇ ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ರಾಜ್ಯದ್ಯಾಂತ ಜಾರಿಯಾಗಿದೆ.
ಜಿಲ್ಲೆಯಲ್ಲಿ ಕಟ್ಟೆಚ್ಚರ ಹಾಕಿದರು ಕೂಡ ಜನತೆ ವೀಕೆಂಡ್ ಕರ್ಫ್ಯೂಯನ್ನು ಕ್ಯಾರೇ ಎನ್ನದೇ ಓಡಾಡುತ್ತಿದ್ದಾರೆ. ಅನವಶ್ಯಕವಾಗಿ ಹೊರಗೆ ಬಂದವರಿಗೆ ಪೊಲೀಸರಿಂದು ಇಂದು ಬೆಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಲಿಂಗಸೂಗೂರು ರಸ್ತೆಯಲ್ಲಿರುವ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಹಾಗೂ ಬಸವೇಶ್ವರ ವೃತ್ತದಲ್ಲಿ ಬೆಳಿಗ್ಗೆ ಫೀಲ್ಡ್‌ಗೆ ಇಳಿದ ಪೊಲೀಸರು ಅನವಶ್ಯಕ ರಸ್ತೆಗಿಳುವ ಬೈಕ್ ಸವಾರರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದೆ.