ವೀಕೆಂಡ್ ಕರ್ಫ್ಯೂ – ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್

ನಾಳೆ ಆದೇಶಕ್ಕೆ ಎಲ್ಲಾರ ಕಾತುರ
ಸಿರವಾರ.ಏ೨೫-ಕೊರೋನಾ ಎರಡನೇ ಅಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿ ಇರುವುದರಿಂದ ಪಟ್ಟಣದಲ್ಲಿ ಮೊದಲ ದಿನ ಕರ್ಫ್ಯೂಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂತು. ಈ ಎರಡು ದಿನ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತು ಬೆಳಗಿನ ಅವಧಿಯಲ್ಲಿ ಕಿರಾಣಿ ತರಕಾರಿ ಹಣ್ಣು ಹಂಪಲು ಸೇರಿದಂತೆ ಇತರೆ ವಸ್ತುಗಳನ್ನು ಜನರು ಜೀವನ ನಡೆಸಲು ಖರೀದಿ ಮಾಡಬೇಕಾಯಿತು.
ಸಮಯ ೧೦ ಗಂಟೆಯಾಗುತ್ತಿದಂತೆ ಎಲ್ಲಾ ವ್ಯಾಪಾರಗಳು ಸ್ಥಗಿತಗೊಂಡಿತದರೂ ಕೂಡ ಕೆಲವು ಜನರು ಅಲ್ಲಲ್ಲಿ ಸಂಚಾರಿಸುವುದು ಕಂಡುಬಂತು.
ಸಿರವಾರ ಠಾಣೆಯ ಪಿ.ಎಸ್.ಐ. ಸುಜಾತ ನಾಯಕ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿ ವರ್ಗದವರು ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ ಹಾಗೂ ಸಿಬ್ಬಂದಿ ವರ್ಗ ರಸ್ತೆಯ ಮೇಲೆ ಅನವಶ್ಯಕ ಸಂಚಾರ ಮಾಡುವ ವಾಹನಗಳನ್ನು ತಡೆದು ವಾಹನಗಳನ್ನು ತಪಾಸಣೆ ಮಾಡಿ ಮತ್ತು ಮಾಸ್ಕ್ ಇಲ್ಲದವರಿಗೆ ದಂಡ ವಿಧಿಸುವ ಮೂಲಕ ಕೋವಿಡ್ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದರು ಮತ್ತು ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ಹೇಳಿ ಮತ್ತು ಕೊರೋನಾ ವಿಕೇಂಡ್ ಕರ್ಪ್ಯೊ ಗೆ ಸಂಪೂರ್ಣ ಸಹಕರಿಸಲು ಮನವಿ ಮಾಡಿಕೊಂಡರು.
ಕೇಲ ಹೋಟೆಲ್ ಪಾರ್ಸಲ್ ವ್ಯವಸ್ಥೆಯನ್ನು ಮಾಡಲಾಗಿತು. ಶುಕ್ರವಾರದಿಂದಲೇ ಮದ್ಯ ಮಾರಾಟ ನಿಷೇಧ ಮಾಡಿರುವದರಿಂದ ಮದ್ಯಪಾನ ಪ್ರೀಯರಿಗೆ ಮದ್ಯ ಇಲ್ಲದೆ ಪರದಾಡಿದರೆ, ಕೇಲ ಕಡೆ ಕಾಳ ಸಂತೆಯಲ್ಲಿ ಅದಿಕ ಧರ ನೀಡಿ ಮದ್ಯವನ್ನು ಖರೀದಿಸಿ ಸೆವನೆ ಮಾಡುತ್ತಿದ್ದರೆ. ಈಗಾಗಲೇ ಗುಟ್ಕಾ, ಸಿಗರೇಟ್ ಬೆಲೆಯಲ್ಲಿಏರಿಕೆಯಾಗಿದೆ.
ಹಣ್ಣು- ತರಕಾರಿ ಮಾರಾಟಕ್ಕೆ ಒತ್ತಾಯ:- ಜನರಿಗೆ ಅಗತ್ಯವಾಗಿ ಬೇಕಾಗಿರುವ ಹಾಲು,ಹಣ್ಣು, ತರಕಾರಿ ಅಗತ್ಯವಸ್ತುಗಳ ಮಾರಾಟಕ್ಕೆ ಅವಕಾಶ ನೀಡಬೇಕು. ರಂಜಾನ್ ಸಮಯವಾಗಿರುವದರಿಂದ ಉಪವಾಸ ಬಿಡುವುದಕ್ಕೆ ಹಣ್ಣುಗಳ ಬೇಕಾಗಿರುವದರಿಂದ ಸಂಜೆ ವೇಳೆ ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಮುಸ್ಲಿಂರ ಅಭಿಪ್ರಾಯವಾಗಿದೆ.
ಹಾಲು, ಹಣ್ಣು, ತರಕಾರಿ ಇನ್ನಿತರ ಮಾರಾಟಕ್ಕೆ ಅವಕಾಶ ನೀಡಿದರೆ ಅದೇ ನೇಪ ಮಾಡಿಕೊಂಡು ಜನರು, ಯುವ ಜನತೆ ರಸ್ತೆಗೆ ಇಳಿಯುತ್ತಾರೆ, ಆದರಿಂದ ಅವಕಾಶ ನಿರಾಕರಣೆ ಮಾಡಲಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಭತ್ತ ಕಟ್ಟವು, ಮೆಣಸಿನಕಾಯಿ ಕಟ್ಟಾವು ಮಾಡುತ್ತಿರುವುದರಿಂದ ಕೂಲಿ ಕಾರ್ಮಿಕರ ವಾಹನಗಳ ಓಡಾಟ ಸಾಮಾನ್ಯವಾಗಿತು. ಒಟ್ಟಿನಲ್ಲಿ ಎರಡು ದಿನಗಳ ಲಾಕ್ ಡೌನ್ ಯಶಸ್ವಿಯಾಗಿ ಪೂರ್ಣಗೊಂಡಿದೆ, ಕೂಲಿ ಕಾರ್ಮಿಕರಿಗೆ, ಬೀದಿ ವ್ಯಾಪಾರಸ್ಥರಿಗೆ ತೊಂದರೆಯಾದರೆ, ನಾಳೇ (ಸೋಮವಾರ) ಲಾಕ್ ಡೌನ್ ಹೊಸ ನಿಯಮ ಬರಬಹುದು, ಬಂದರೂ ಎಂತಹ ನಿಯಮ ಬರಬಹುದು ಎಂದು ಎಲ್ಲಾರ ಚಿತ್ತ ಆ ಕಡೆ ನೋಡುವಂತಾಗಿದೆ.