ವೀಕೆಂಡ್ ಕರ್ಫ್ಯೂ:ತಳ್ಳು ಬಂಡಿಯ ಮೊರೆ ಹೋದ ವ್ಯಾಪಾರಿ-ಹೆಚ್ಚಿದ ಆತಂಕ

(ರಾಚಯ್ಯ ಸ್ವಾಮಿ ಮಾಚನೂರು)
ರಾಯಚೂರು.ಏ.೨೪-ಕೊರೊನಾ ಮಹಾಮಾರಿಯ ಎರಡನೇ ಅಲೆಯೂ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ರಾಜ್ಯ ಸರ್ಕಾರ ೧೪ ದಿನಗಳ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ವಿಧಿಸಲಾಗಿದ್ದು, ತರಕಾರಿ, ಹಣ್ಣು ವ್ಯಾಪಾರಸ್ಥರು ತಳ್ಳು ಬಂಡಿಯ ಮೊರೆ ಹೋಗಿದ್ದು, ಕೊರೊನಾ ಹೆಚ್ಚಾಗುವ ಸಾಧ್ಯತೆ ಎದ್ದು ಕಾಣುತ್ತಿದೆ.
ಕೊರೊನಾ ಎರಡನೇ ಅಲೆ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುಮಾರು ೧೬೦೦ ಕ್ಕೂ ಅಧಿಕ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಗಳ ಮೂಲಕ ೧೪ ದಿನದ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ವಿಧಿಸಲಾಗಿದ್ದು, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗಬಾರಿದೆಂದು ನಗರಸಭೆ ಮೂಲಕ ತಳ್ಳು ಬಂಡಿ ಮುಖಾಂತರ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದೆ.
ಈಗಾಗಲೇ ತಳ್ಳು ಬಂಡಿ ವ್ಯಾಪಾರಸ್ಥರು ನಗರಸಭೆಯಲ್ಲಿ ನೋಂದಣಿ ಮಾಡಿಕೊಂಡು ನಗರಾದ್ಯಂತ ತಳ್ಳು ಬಂಡಿ ಮುಖಾಂತರ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ನಗರದ ಕೆಲ ಬಡಾವಣೆಗಳಲ್ಲಿ ಪ್ರತಿ ನಿತ್ಯ ೧೦೦ ಕ್ಕೂ ಕೊರೊನಾ ಪಾಟಿಸಿವ್ ಪ್ರಕರಣ ದಾಖಲಾಗುತ್ತಿದೆ. ತಳ್ಳು ಬಂಡಿಯ ವ್ಯಾಪಾರಸ್ಥರು ಕೊರೊನಾ ಪಾಟಿಸಿವ್ ಬಂದಿರುವ ಬಡಾವಣೆಗಳಲ್ಲಿ ಸಂಚರಿಸಿ, ತದನಂತರ ಇನ್ನಿತರ ಬಡಾವಣೆಗಳಿಗೆ ಸಂಚರಿಸುತ್ತಿದ್ದು, ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ.
ಸರ್ಕಾರವು ಕೊರೊನ ತಡೆಗಟ್ಟಲು ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದ್ದು ಆದರೆ ತಳ್ಳು ಬಂಡಿಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ನೀಡಿದ್ದು ಇದರಿಂದ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಬಯಪಡುತ್ತಿದ್ದರೆ ಜಿಲ್ಲಾಡಳಿತ ಮತ್ತು ನಗರಸಭೆಯ ಅಧಿಕಾರಿಗಳು ತಳ್ಳು ಬಂಡಿಯ ವ್ಯಾಪಾರಸ್ಥರಿಗೆ ಪಾಸ್ ಗಳನ್ನು ನೀಡಿ ಒಂದು ಬಡ್ಡಿಯನ್ನು ಕೇವಲ ಒಂದೊಂದು ಬಡಾವಣೆಯ ಸ್ಥಳದಲ್ಲಿ ಸೀಮಿತವಾದರೆ ಕೊರೊನ ಸೋಂಕು ಹರಡುವ ಭಯ ಕಡಿಮೆ ಆಗುತ್ತಿದ್ದು ಸಣ್ಣ ಪುಟ್ಟ ವ್ಯಾಪಾರಿಗಳ ಕುಟುಂಬಕ್ಕೆ ತೊಂದರೆಯಾಗುವುದಿಲ್ಲ ವ್ಯಾಪಾರಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದಾರೆ.