ವೀಕೆಂಡ್ ಕರ್ಫ್ಯೂಗೆ ಕಿಮ್ಮತ್ತು ಕೊಡದ ಕೋಟೆನಾಡು

ಚಿತ್ರದುರ್ಗ.ಜ.೮: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ವೀಕೆಂಡ್ ಕರ್ಫ್ಯೂಗೆ ಕಿಮ್ಮತ್ತು ಕೊಡದ ಕೋಟೆನಾಡು ಚಿತ್ರದುರ್ಗದ ಜನರಿಗೆ ಪೊಲೀಸರು ಫೈನ್ ಹಾಕಿ ಬಿಸಿ ಮೂಡಿಸಿದ್ದಾರೆ.ರಾಜ್ಯ ಸೇರಿದಂತೆ ದೇಶದೆಲ್ಲೇಡೆ ಕೊರೊನಾ ಮೂರನೆ ಅಲೆ ಎದ್ದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದೆಲ್ಲೇಡೆ ವಾರಾಂತ್ಯದ ಕರ್ಫ್ಯೂ ಮಾಡುವಂತೆ ಆದೇಶ ನೀಡಿದ್ದು, ಶನಿವಾರ ಹಾಗೂ ಭಾನುವಾರ ಸಾರ್ವಜನಿಕರು ಕೆಲಸವಿಲ್ಲದೆ ರಸ್ತೆಯಲ್ಲಿ ಓಡಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ ಚಿತ್ರದುರ್ಗದ ಜನತೆ ಮಾತ್ರ ಇಂದು ಬೆಳಗ್ಗೆ ದಿನನಿತ್ಯದಂತೆ ಎದ್ದು ಮಾಸ್ಕ್ ಕೂಡ ಧರಿಸದೆ ನಗರದಲ್ಲೆಡೆ ಸಂಚರಿಸುತ್ತಿದ್ದರು. ಗಾಂಧಿವೃತ್ತದಲ್ಲಿ ಹೂ, ಹಣ್ಣು ಖರೀದಿಗೆ ಮುಗಿ ಬಿದ್ದಿದ್ದರು. ಆಟೋ, ಬೈಕ್ ಗಳಲ್ಲಿ ದಿನನಿತ್ಯದಂತೆ ಗಾಂಧಿವೃತ್ತ ಜನದಟ್ಟಣೆಯಲ್ಲಿ ಕೂಡಿತ್ತು. ಸರ್ಕಲ್ ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ರಸ್ತೆಗೆ ಬರದಂತೆ ಮನವಿ ಮಾಡಿದರೂ ಕೂಡ ಎಚ್ಚೆತ್ತುಕೊಳ್ಳದ ಜನರಿಗೆ ದಂಡದ ಬಿಸಿ ಮುಟ್ಟಿಸಿದರು.ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡ್ತಿರೋ ಖಾಕಿ ಪಡೆ, ಮಾಸ್ಕ್ ಧರಿಸದೇ ಬರುವ‌ ಜನರಿಗೂ ಫೈನ್ ಬಿಸಿ ಮುಟ್ಟಿಸಿ, ಮಾಸ್ಕ್ ಧರಿಸಿ ಇಲ್ಲ, ದಂಡ ಕಟ್ಟಿ ಎಂದು  ಪೊಲೀಸರು ಹೇಳುತ್ತಿದ್ದರು. ಇದನ್ನು ದೂರದಿಂದಲೇ ರಸ್ತೆಯಲ್ಲಿ ಬರುತ್ತಿದ್ದ ಜನರು ಪೊಲೀಸರನ್ನು ಕಂಡು ಕಾಲಿಗೆ ಬುದ್ದಿ ಹೇಳಿ, ಎದ್ದುಬಿದ್ದು ಓಟಕ್ಕೆ ಮುಂದಾದರು.ಸುಖಾ ಸುಮ್ಮನೆ ಓಡಾಡಿದ್ರೆ ಕಠಿಣ ಕ್ರಮ ಎಂದು ಎಚ್ಚರಿಕೆ ನೀಡಿದ ಪೊಲೀಸರು ಫೈನ್ ಹಾಕಿದರು ಬುದ್ದಿ ಕಲಿಯದ ಜಿಲ್ಲೆಯ ಜನ ಕುಂಟು ನೆಪಗಳನ್ನು ಹೇಳಿ ರಸ್ತೆಗಳಲ್ಲಿ ಓಡಾಡುತ್ತಿದ್ದ ದೃಶ್ಯಗಳು ಕಂಡು ಬಂದವು.—————Attachments area