ವೀಕೆಂಡ್ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ

ಕೋಲಾರ,ಏ.೨೫: ಕೋಲಾರದಲ್ಲಿ ವೀಕೆಂಟ್ ಕರ್ಫ್ಯೂಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕೋಲಾರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು.
ಬೆಳಗ್ಗೆ ೧೦ ಗಂಟೆಯ ಒಳಗೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ನೀಡಲಾಗಿತ್ತು. ಇನ್ನು ವಿನಾಕಾರಣ ರಸ್ತೆಗಳಿಯುವ ಜನ್ರಿಗೆ ಪೊಲೀಸರಿಂದ ವಾರ್ನಿಂಗ್ ಮಾಡಿದ್ದು, ಅಲ್ಲೊಂದು ಇಲ್ಲೊಂದು ವಾಹನ ಸಂಚಾರ ಬಿಟ್ಟರೆ ಎಲ್ಲವೂ ಬಂದ್ ಆಗಿತ್ತು.


ಕೋಲಾರದಲ್ಲಿ ವೀಕೆಂಡ್ ಕರ್ಪ್ಯೂ ನಡುವೆ ಜನರು ತರಕಾರಿ ಖರೀದಿಗೆ ಮುಗಿಬಿದ್ದಿದ್ದರು. ಜನರು ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು. ಕೋಲಾರ ನಗರದ ತರಕಾರಿ ಮಾರುಕಟ್ಟೆಯಲ್ಲಿ ಜನ ಜಂಗುಳಿ ಹೆಚ್ಚಾಗಿದ್ದು, ಕೊರೊನಾ ಆತಂಕದ ನಡುವೆಯೂ ಜನರು ಮೈಮರೆತಿರುವುದು ಕಂಡು ಬಂತು. ಕೋಲಾರ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂನಿಂದಾಗಿ ಏಷ್ಯಾದ ದೊಡ್ಡ ಟೊಮೆಟೊ ಮಾರುಕಟ್ಟೆಗೆ ಬೀಗ ಹಾಕಿದ್ದು. ಟೊಮೆಟೊ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಿರುವ ಹಿನ್ನಲೆ , ಕೋಲಾರದ ಎಪಿಎಂಸಿ ಮಾರುಕಟ್ಟೆಯ ಹೊರಗೆ ಟ್ರಕ್ ಗಳು ಸಾಲುಗಟ್ಟಿ ನಿಂತಿದ್ದವು. ಎಲ್ಲೆಡೆ ವೀಕೆಂಟ್ ಕರ್ಫ್ಯೂ ಜೋರಾಗಿದ್ದು, ಕೋಲಾರ ಜಿಲ್ಲೆಯಲ್ಲಿ ವೀಕೆಂಟ್ ಕರ್ಫ್ಯೂವನ್ನ ದಿಕ್ಕರಿಸಿ ಬೀದಿಗಿಳಿದಿದ್ದ ನೂರಾರು ಬೈಕ್ ಗಳನ್ನ ಪೊಲೀಸರು ಜಪ್ತಿ ಮಾಡಿದರು. ಕೋಲಾರ ಸೇರಿದಂತೆ ಮಾಲೂರು, ಕೆಜಿಎಫ್ ಮುಂತಾದುಗಳ ಕಡೆ ಅನಗತ್ಯವಾಗಿ ಓಡಾಡುತ್ತಿದ್ದ ನೂರಕ್ಕೂ ಹೆಚ್ಚು ಬೈಕ್ ಗಳನಗ್ನ ವಶಕ್ಕೆ ಪಡೆದಿದ್ದಾರೆ.
ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಓಡಾಟ ಹಿನ್ನಲೆ ಕ್ರಮಕೈಗೊಂಡಿದ್ದು, ಕರ್ಪ್ಯೂ ಇದ್ದರೂ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಪುಲ್ ಡ್ರಿಲ್ ನಡೆಸಿದ್ದಾರೆ. ಅಲ್ಲದೆ ತಮ್ಮ ಬೈಕ್ ಗಳಿಗಾಗಿ ಪೊಲೀಸ್ ಠಾಣೆಗಳ ಎದುರು ನೂರಾರು ಬೈಕ್ ಸವಾರರು ಜಮಾಯಿಸಿದ್ದರು. ಇನ್ನು ವೀಕೆಂಡ್ ಕರ್ಫ್ಯೂವನ್ನ ಪರಿಶೀಲನೆ ನಡೆಸಿದ ಕೋಲಾರ ಜಿಲ್ಲಾವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅನಗತ್ಯವಾಗಿ ಓಡಾಟ ಹಿನ್ನಲೆ ಬೈಕ್ ಗಳನ್ನ ಸೀಜ್ ಮಾಡಲಾಗಿದ್ದು, ಬೆಳಗ್ಗೆಯಿಂದ ಜಿಲ್ಲೆಯ ವಿವಿಧೆಡೆ ಬೈಕ್ ಗಳು ಸೀಜ್ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಓಡಾಟ ಹಿನ್ನಲೆ ಈ ಕ್ರಮ ಕೈಗೊಂಡಿದ್ದು, ಅನಗತ್ಯ ಓಡಾಟ ಮಾಡಿದ್ರೆ ಬೈಕ್ ಸೀಜ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಇನ್ನು ಇದೇ ವೇಳೆ ಕೋಲಾರದ ಪ್ರಮುಖ ರಸ್ತೆಗಳಿಗೆ ಡಿಸಿ ಸೆಲ್ವಮಣಿ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ರು. ಕೋಲಾರದ ಅಮ್ಮವಾರಿಪೇಟೆ, ಎಂಬಿ ರಸ್ತೆ, ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ವೀಕೆಂಡ್ ಕರ್ಫ್ಯೂ ಸಕ್ಸಸ್ ಆಗಿದ್ದು, ಅನ್ಯಗತ್ಯವಾಗಿ ಓಡಾಡಿದರೆ ಕ್ರಮಕೈಗೊಳ್ಳಲಾಗುವುದು ಎಂದರು. ಎಲ್ಲಾ ಕಡೆ ಬ್ಯಾರಿಕೇಡ್ ಹಾಕಲಾಗಿದ್ದು, ಕೋಲಾರದಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿರುವ ಪರಿಣಾಮ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.