ವೀಕೆಂಡ್ ಕಫ್ರ್ಯೂ ಯಶಸ್ವಿ

ಬಾದಾಮಿ,ಏ25: ಕೋವಿಡ್ ಅಲೆ ತಡೆಗಟ್ಟುವ ಸಲುವಾಗಿ ನಗರದಾದ್ಯಂತ ವಿಕೇಂಡ್ ಕಫ್ರ್ಯೂ ಶನಿವಾರ ಯಶಸ್ವಿಯಾಯಿತು. ಬೆಳಿಗ್ಗೆ 6 ರಿಂದ 10 ಗಂಟೆಯವೆರೆಗೆ ಮಾತ್ರ ಕಿರಾಣಿ, ಹಾಲು, ಕಾಯಿಪಲ್ಲೆ ಸೇರಿದಂತೆ ಅಗತ್ಯ ಸೇವೆಗಳನ್ನು ತೆರೆದಿದ್ದವು. ಇವುಗಳನ್ನು ಹೊರತುಪಡಿಸಿದರೆ ಎಲ್ಲ ಸೇವೆಗಳು ಬಂದ್ ಆಗಿದ್ದವು. ಪ್ರಯಾಣಿಕರು ಕಡಿಮೆ ಇದ್ದ ಹಿನ್ನೆಲೆ ಬಾಗಲಕೋಟ, ಕೆರೂರ, ಗುಳೇದಗುಡ್ಡ, ಇಳಕಲ್, ಗದಗ, ರೋಣ ನಗರಗಳಿಗೆ ಒಂದೊಂದು ಬಸ್ ಓಡಿಸಿ ಸಾರಿಗೆ ಇಲಾಖೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದರು. ಬೇರೆ ಊರಿನಿಂದ ಬಂದು ಗ್ರಾಮೀಣ ಭಾಗಗಳಿಗೆ ಹಾಗೂ ಮುಷ್ಟಿಗೇರಿಗೆ ಹೋಗಬೇಕಾದ ವಯೋವೃದ್ದೆ ಒಬ್ಬಳು ಬಸ್, ಅಟೋ ಇಲ್ಲದೇ ಪರದಾಡಿದಳು. ಪ್ರಮುಖ ರಸ್ತೆ, ಬಸ್ ನಿಲ್ದಾಣ, ಜನನಿಬೀಡ ಸ್ಥಳಗಳ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಎಲ್ಲ ಅಂಗಡಿಗಳು ಬಂದ್ ಆದ ಕಾರಣ ಕೆಲ ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ವ್ಯಾಪಾರಸ್ಥರಿಗೆ ಬಹಳ ತೊಂದರೆ ಅನುಭವಿಸಬೇಕಾಯಿತು.
ತಹಶೀಲ್ದಾರ್ ಸುಹಾಸ ಇಂಗಳೆ, ಪಿ.ಎಸ್.ಐ.ಪ್ರಕಾಶ ಬಣಕಾರ, ಪುರಸಭೆ ಮುಖ್ಯಾಧಿಕಾರಿ ಜ್ಯೋತಿಗಿರೀಶ, ಮುಖ್ಯ ರಸ್ತೆಯಲ್ಲಿ ನಿಂತು ಅನಗತ್ಯವಾಗಿ ಓಡಾಡುವವರಿಗೆ, ಮಾಸ್ಕ್ ಧರಿಸದೇ ಇರುವವರಿಗೆ ಬಿಸಿ ಮುಟ್ಟಿಸಿದರು. ಪ್ರಮುಖ ರಸ್ತೆಗಳಲ್ಲಿ ಪೊಲೀಸ್ರು ಬ್ಯಾರಿಕೇಡ್ ಹಾಕಿದರು. ನಗರಾದ್ಯಂತ ವಿಕೇಂಡ್ ಲಾಕ್‍ಡೌನ್ ಯಶಸ್ವಿಯಾಯಿತು.