ವೀಕೆಂಡ್​​ ಕರ್ಫ್ಯೂ ವೇಳೆ ಅನಗತ್ಯ ಓಡಾಟ: 62 ವಾಹನಗಳು ಸೀಜ್

ಕಲಬುರಗಿ:ಏ.25: ವಿಕೇಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿದ 62 ವಾಹನಗಳನ್ನು ಇಂದು ಕಲಬುರಗಿ ನಗರ ಪೊಲೀಸರು ಸೀಜ್ ಮಾಡಿದ್ದಾರೆ.

ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಸಾಕಷ್ಟು ಜಾಗೃತಿ ಮೂಡಿಸಿದರೂ ಅನಗತ್ಯವಾಗಿ ರಸ್ತೆಗೆ ಇಳಿದ ದ್ವಿಚಕ್ರ ವಾಹನ, ಮೂರು ಚಕ್ರದ ವಾಹನ ಹಾಗೂ ನಾಲ್ಕು ಚಕ್ರಗಳ ವಾಹನಗಳು ಸೇರಿ ಒಟ್ಟು 194 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ ವಾಹನ ಸವಾರರಿಗೆ ಶಾಕ್ ನೀಡಿದ್ದಾರೆ.
ಕಳೆದ 22ರಂದು ನೈಟ್ ಕರ್ಫ್ಯೂ ವೇಳೆ 29 ವಾಹನ ಮತ್ತು 23ರ ನೈಟ್ ಕರ್ಫ್ಯೂ ವೇಳೆ 21ಮತ್ತು 24 ರಂದು 82 ವಾಹನಗಳನ್ನು ನಗರದ ಪೊಲೀಸರು ಜಪ್ತಿ ಮಾಡಿದ್ದಾಗಿ ಎಎಸ್​ಪಿ ಅಂಶುಕುಮಾರ ಮಾಹಿತಿ ನೀಡಿದ್ದಾರೆ.