ವಿ.ಹೆಚ್.ಪಿ  ಬಜರಂಗದಳ  ಪ್ರತಿಭಟನೆ

ಸಂಜೆವಾಣಿ ವಾರ್ತೆ

ಹಿರಿಯೂರು: ಸೆ.13-ತಮಿಳುನಾಡಿನ  ಸಚಿವ   ಉದಯವಿಧಿ ಸ್ಟಾಲಿನ್ ರವರು  ಸನಾತನ ಹಿಂದೂ ಧರ್ಮವನ್ನು ಡೆಂಗ್ಯೂ, ಮಲೇರಿಯಾ ರೋಗಗಳಿ ಹೋಲಿಸಿದ್ದು ಇದನ್ನು ನಾಶಗೊಳಿಸಬೇಕು ಎಂಬ ಹೇಳಿಕೆ ನೀಡಿದ್ದು ಮತ್ತು ಡಿ.ಎಂ.ಕೆ. ಮುಖಂಡ ಎ.ರಾಜ ರವರು ಹಿಂದೂ ಧರ್ಮವನ್ನು ಏಡ್ಸ್ ಮತ್ತು ಕ್ಯಾನ್ಸರ್‌ಗೆ ಹೋಲಿಸಿದ್ದು ಹಿಂದುಗಳ ಭಾವನೆಗೆ ಧಕ್ಕೆ ಉಂಟಾಗಿದೆ ಹಾಗೂ ಇದು ಸಂವಿಧಾನ ವಿರೋಧಿಯಾಗಿದೆ ಎಂದು ಇವರ ಹೇಳಿಕೆಯನ್ನು ಖಂಡಿಸಿ ಹಿಂದು ಪರ ಸಂಘಟನೆಗಳು ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಿ ತಹಸಿಲ್ದಾರರಿಗೆ ಮನವಿ ಪತ್ರ ಅರ್ಪಿಸಿದರು  ನಗರದ ರಂಜಿತ್ ಹೋಟೆಲ್ ಮುಂಭಾಗದಿಂದ ಪ್ರಧಾನ ರಸ್ತೆಯ ಮೂಲಕ ಪ್ರತಿಭಟನೆ ನಡೆಸಿ ತಾಲೂಕು ಕಚೇರಿ ತಲುಪಿದರು ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ್ಯದರ್ಶಿ  ಶ್ರೀನಿವಾಸ್ ಮಸ್ಕಲ್ ವೆಂಕಟೇಶ್ ಪ್ರಶಾಂತ್ ಗೋವರ್ಧನ್ ಗೋವಿಂದರಾಜ್ ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು