ವಿ.ವಿ.ಎಸ್.ಎಸ್. ಟ್ರಸ್ಟ್ ಗೆ ಜಮೀನು  ಮಂಜೂರು: ಬುಡಾ ಅಧ್ಯಕ್ಷರ ಭರವಸೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ,ಸೆ,19: ನಗರದ ಕನ್ಯಾಕಾ ಪರಮೇಶ್ವರಿ ಕಲ್ಯಾಣ ಮಂದಿರದ ಸಭಾಗಂಣದಲ್ಲಿ  ಬುಡಾ ನೂತನ ಅದ್ಯಕ್ಷ  ಮಾರುತಿ ಪ್ರಸಾದ್‌ ಅವರಿಗೆ  ಸನ್ಮಾನ ಕಾರ್ಯಕ್ರಮವನ್ನು ವಿ.ವಿ.ಎಸ್.ಎಸ್. ಟ್ರಸ್ಟ್ ಹಮ್ಮಿಕೊಂಡಿತ್ತು.
ಟ್ರಸ್ಟ್  ಅದ್ಯಕ್ಷ ಕೆ.ವೆಂಕಟೇಶಲು ಶೆಟ್ಟಿ, ಪೋಲಾ ಬಸವರಾಜ್, ತಲ್ಲಂ ರಮೇಶ್ ಅವರು ಬುಡಾ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು.
ಸನ್ಮಾನಿತಗೊಂಡು  ಮಾತನಾಡಿದ ಮಾರುತಿ ಪ್ರಸಾದ್ ಅವರು, ನಾನು ಸಮಾಜ ಸೇವೆಗೆ ಸದಾ ಬದ್ದನಾಗಿರುತ್ತೆನೆ. ಬಳ್ಳಾರಿ ಪ್ರಜೆಗಳು  ಯಾವುದೇ ಕೆಲಸಗಳಿದ್ದರು ನೇರವಾಗಿ ಬಂದು ನನ್ನ ಜೊತೆ ಮಾತನಾಡಬಹುದು. ನಾನು ಯಾವುದೇ ಕೆಟ್ಟ ಹೆಸರನ್ನು ತರುವುದಿಲ್ಲ ಎಂದು ನುಡಿದರು.
ಈ  ಟ್ರಸ್ಟ್ ನಿಂದ ಶಾಲೆ ಮತ್ತು ಹಿರಿಯ ನಾಗರಿಕರಿಗೆ ಹಾರೈಕೆ ಕೇಂದ್ರವನ್ನು ನಿರ್ಮಾಣ ಮಾಡಲು ಬುಡಾದಿಂದ  5 ಎಕರೆ ಜಮೀನು  ಮಂಜೂರು ಮಾಡಬೇಕೆಂಬ   ಮನವಿಗೆ  ಸ್ಪಂದಿಸಿದ ಮಾರುತಿ ಈ  ವಿಚಾರವನ್ನು ಜಿಲ್ಲಾಧಿಕಾರಿಗಳ ಜೊತೆ ಚರ್ಚೆಸಿ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ರಮೇಶ್ ಗೋಪಾಲ್, ಜಯಪ್ರಕಾಶ್ ಗುಪ್ತ, ಪಾಲಿಕೆ ಸದಸ್ಯ  ಆಶೋಕ್, ಮಾಜಿ ಮೇಯರ್ ಇಬ್ರಾಹಿಮ್ ಬಾಬು, ನರಸೇಪಲ್ಲಿ ಮುರಾರಿ, ಜಯಂತಿ ಕಿಶೋರ್, ಗಾದೆಂ ಗೋಪಾಲ್ ಕೃಷ್ಟ, ಟಿ.ಜಿ. ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ  ತಿಪ್ಪಯ್ಯಶೆಟ್ಟಿಯವರಿಂದ ಯೋಗದ  ಪ್ರದರ್ಶಿಸನ ಮತ್ತು ಮಕ್ಕಳ ನೃತ್ಯ ಗಮನ ಸೆಳೆಯಿತು.‌.

Attachments area