ವಿ.ಪ. ಚುನಾವಣೆ ಪ.ಪಂ. ಸದಸ್ಯರಿಗೆ ಮತದಾನದ ತರಬೇತಿ

ಸಂಜೆ ವಾಣಿ ವಾರ್ತೆ
ಕೊಟ್ಟೂರು ಡಿ 06 ;ಕರ್ನಾಟಕ ವಿಧಾನ ಪರಿಷತ್ ಚುನಾವಣೆ 2021ರ ಸಂಬಂಧ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪಟ್ಟಣಪಂಚಾಯಿತಿ ಸದಸ್ಯರಿಗೆ ಮತದಾನದ ತರಬೇತಿ ಭಾನುವಾರ ನೀಡಲಾಯಿತು.ಶಿಕ್ಷಕ ಮನೋಹರ ಮತದಾನದ ತರಬೇತಿ ನೀಡಿದರು.ಈ ಸಂದರ್ಭದಲ್ಲಿ ಪಟ್ಟಣಪಂಚಾಯಿತಿ ಅಧ್ಯಕ್ಷೆ ಭಾರತಿ ಸುಧಕರಗೌಡುಪಾಟಲ್, ಮುಖ್ಯಾಧಿಕಾರಿ ನಸುರುಲ್, ಸಿಬ್ಬಂದಿ ಪರಸಪ್ಪ ಸೇರಿದಂತೆ ಅನೇಕ ರಿದ್ದರು.