ವಿ.ಪ.ಚುನಾವಣೆ ಕೋಟ್ಯಾಧೀಶರ ನಡುವೆ ಕದನ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಗಣಿನಾಡಿನಲ್ಲಿ ನಡೆಯುವ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದರೆ ಕ್ಯೋಟ್ಯಾಧೀಶರೇ ಬೇಕು ಎಂಬುವಂತೆ ಹಾಗಿ ಹಾಲಿ ನಡೆಯುವ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಕ್ಯೋಟ್ಯಾಧೀಶರೇ ಆಗಿದ್ದಾರೆ.
ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರು ಸ್ವತಃ ನಿನ್ನೆ ನಾಮ ಪತ್ರ ಸಲ್ಲಿಸುವ ವೇಳೆ ಸಲ್ಲಿಸಿರುವ ಚರ ಮತ್ತು ಸ್ತಿರಾಸ್ಥಿಯ ವಿವರದಿಂದ ಅವರು ಕೋಟ್ಯಾಧೀಶರ ಎಂಬುದಾಗಿ ತಿಳಿದು ಬರುತ್ತಿದೆ.
ಕೊಂಡಯ್ಯ ಅವರ ಬಳಿ:
ಇವರ ಬಳಿ  7 ಲಕ್ಷ ರೂ ನಗದು, ಪತ್ನಿ ಕೆ. ಮೀನಾಕ್ಷಿ ಅವರ ಬಳಿ 2 ಲಕ್ಷ ರೂ ನಗದು ಹೊಂದಿದ್ದಾರೆ.
ಅಭ್ಯರ್ಥಿ 33.44 ಲಕ್ಷ ರೂ ಮೌಲ್ಯದ 760 ಗ್ರಾಂ ಚಿನ್ನ, 10.62 ಲಕ್ಷ ಬೆಲೆಯ 16.9 ಕೆಜಿ ಬೆಳ್ಳಿ ಮತ್ತು ಅವರ ಪತ್ನಿಯ ಹತ್ತಿರ 84.49 ಲಕ್ಷ ರೂ  ಬೆಲೆಬಾಳುವ 1920 ಗ್ರಾಂ ಚಿನ್ನ, 3.89 ಲಕ್ಷ ಮೌಲ್ಯದ 6.2 ಕೆಜಿ ಬೆಳ್ಳಿ ಇದೆ. 5.19 ಲಕ್ಷದ ಅಂಬಾಸಿಡರ್ ಕಾರು ಹಾಗೂ ಅವರ ಪತ್ನಿಯ ಹೆಸರಿನಲ್ಲಿ 40.76 ಲಕ್ಷದ ಫಾರ್ಚುನರ್ ಕಾರು ಹೊಂದಿದ್ದಾರೆ. ಒಟ್ಟಾರೆ ಚರಾಸ್ತಿ 5.53 ಕೋಟಿ, ಪತ್ನಿ ಬಳಿ 2.05 ಕೋಟಿ ರೂ ಹಾಗೂ ಸ್ಥಿರಾಸ್ತಿ  ಕೊಂಡಯ್ಯ ಬಳಿ 1.20 ಕೋಟಿ, ಪತ್ನಿ ಬಳಿ 2.65 ಕೋಟಿ ಹೊಂದಿದ್ದಾರೆ.
ಸತೀಶ್ ಅವರ ಬಳಿ:
ಇವರ ಐದುಬಲ ಕೋಟಿಗೂ ಹೆಚ್ಚು ಮೌಲ್ಯದ   7 ಕಾರುಗಳನ್ನು ಹೊಂದಿದ್ದಾರೆ . ಇವರ ಬಳಿ ನಗದು 7.02 ಲಕ್ಷರೂ, ಪತ್ನಿ ಪ್ರೀತಿ ಏಚರೆಡ್ಡಿ ಬಳಿ 86 ಸಾವಿರ, ಪ್ರತ್ರರಾದ ಕೌಶಿಕ್ 26 ಸಾವಿರ, ಕಾರ್ತಿಕ್ 11 ಸಾವಿರ ಹೊಂದಿದ್ದಾರೆ.
ಅಭ್ಯರ್ಥಿ ಹೆಸರಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ 1.33 ಕೋಟಿ, ಪತ್ನಿ ಹೆಸರಿನಲ್ಲಿ 55.17 ಲಕ್ಷ, ಇಬ್ಬರ ಪುತ್ರರ ಹೆಸರಿನಲ್ಲಿ ಒಟ್ಟು 11.63 ಲಕ್ಷ ಠೇವಣ ಇದೆ. ಇದಲ್ಲದೆ ನಾನಾ ಕಡೆ ಕೋಟ್ಯಂತರ ರುಪಾಯಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ.
ವಿವಿಧೆಡೆ ಸತೀಶ್ ಅವರು 8.40 ಕೋಟಿ, ಪತ್ನಿ 1.18 ಕೋಟಿ, ಹಿರಿಯ ಪುತ್ರ: 39.49 ಲಕ್ಷ,ಎರಡನೇ  ಪುತ್ರ: 35.49 ಲಕ್ಷ ಹೂಡಿಕೆ ಮಾಡಿದ್ದಾರೆ.
ಇವರು  ಪತ್ನಿ 17.99 ಲಕ್ಷ, ಪುತ್ರ, ಕೌಶಿಕ್ 5 ಲಕ್ಷ ಸಾಲ ಪಡೆದಿದ್ದಾರೆ.
ಅಭ್ಯರ್ಥಿ ಬಳಿ 6.75 ಕೋಟಿ ಮೌಲ್ಯದ 15698.41 ಗ್ರಾಂ ಚಿನ್ನಾಭರಣ, ಪತ್ನಿ ಬಳಿ 68.26 ಲಕ್ಷ ಮೌಲ್ಯದ 1587.53 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ.
ಸತೀಶ್ ಅವರ ಹೆಸರಿನಲ್ಲಿ 90.42 ಲಕ್ಷ, ಪತ್ನಿ 33.84 ಲಕ್ಷ, ಹಿರಿಯ ಪತ್ರ 30 60 ಲಕ್ಷ, ದ್ವಿತೀಯ ಪುತ್ರ 28.20 ಲಕ್ಷ ಮೌಲ್ಯದ ಕೃಷಿ ಭೂಮಿ, ಹಾಗೂ 2,89 ಕೋಟಿ ಹಾಗೂ ಪತ್ನಿ ಹೆಸರಿನಲ್ಲಿ 19.54 ಕೋಟಿ ಮೌಲ್ಯದ ವ್ಯಾಪಾರ ಮಳಿಗೆ ಮತ್ತು ಪತಿ, ಪತ್ನಿ ಹೆಸರಿನಲ್ಲಿ 19.72 ಕೋಟಿ ಮೌಲ್ಯದ ರೆಸಿಡೆನ್ಸಿಯಲ್ ಬಿಲ್ಡಿಂಗ್ ಹೊಂದಿದ್ದಾರೆ.
ಅಭ್ಯರ್ಥಿ ಸತೀಶ್ ಹೆಸರಿನಲ್ಲಿ 9 ಲಕ್ಷ  ರೂ ಮತ್ತು  ಪತ್ನಿ ಹೆಸರಿನಲ್ಲಿ 3.74ಕೋಟಿ ಇದೆ. ಒಟ್ಟಾರೆಯಾಗಿ ಚರಾಸ್ತಿ 84.79 ಕೋಟಿ, ಪತ್ನಿ 5.64 ಕೋಟಿ, ಹಿರಿಯ ಪುತ್ರ 1.44 ಕೋಟಿ, ದ್ವಿತೀಯ ಪತ್ರ 1.21 ಕೋಟಿ ಹಾಗೂ ಸ್ಥಿರಾಸ್ತಿ ಅಭ್ಯರ್ಥಿ ಹೆಸರಿನಲ್ಲಿ 11.54 ಕೋಟಿ, ಪತ್ನಿ ಹೆಸರಲ್ಲಿ 31.85 ಕೋಟಿ, ಹಿರಿಯ ಪತ್ರ 30 60 ಲಕ್ಷ, ದ್ವಿತೀಯ ಪುತ್ರ 28 20 ಲಕ್ಷ ಹೊಂದಿದ್ದಾರೆ.

ಕೆ.ಸಿ. ಕೊಂಡಯ್ಯ ಅವರ ಚರಾಸ್ತಿ 25.53 ಕೋಟಿ, ಪತ್ನಿಯದು 22.05 ಕೋಟಿ ಹಾಗೂ ಸ್ಥಿರಾಸ್ತಿ 11.20 ಕೋಟಿ, ಪತ್ನಿಯದು 12.65 ಕೋಟಿ ರೂಪಾಯಿ.
ಏಚರೆಡ್ಡಿ ಸತೀಶ್ ಅವರ ಚರಾಸ್ತಿ 284.79 ಕೋಟಿ, ಪತ್ನಿ 5.64 ಕೋಟಿ, ಸ್ಥಿರಾಸ್ತಿ ಅಭ್ಯರ್ಥಿ ಹೆಸರಿನಲ್ಲಿ 211.54 ಕೋಟಿ, ಪತ್ನಿ 731.85 ಕೋಟಿ ರೂಪಾಯಿ.  ಪತಿಯರಿಗಿಂತ ಪತ್ನಿಯರೇ  ಹೆಚ್ಚು ಆಸ್ತಿ ಹೊಂದಿದ್ದಾರೆ.