ವಿ.ಪ. ಆಗ್ನೇಯ ಪದವಿದರ ಕ್ಷೇತ್ರ ಚುನಾವಣೆಗೆ ಸಿದ್ದತೆ

ಮಾಲೂರು.೨೮:ವಿಧಾನ ಪರಿಷತ್ ಆಗ್ನೇಯ ಪದವಿದರ ಕ್ಷೇತ್ರಕ್ಕೆ ಅ.೨೮ರ ಬುಧವಾರ ನಡೆಯಲಿರುವ ಚುನಾವಣೆಯಲ್ಲಿ ಪದವಿದರ ಮತದಾರರ ಮತದಾನಕ್ಕಾಗಿ ಮುಕ್ತ ಹಾಗೂ ನ್ಯಾಯಸಮ್ಮತ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ತಹಶಿಲ್ದಾರ್ ಎಂ.ಮಂಜುನಾಥ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಗಳಿಗೆ ತೆರಳುವ ಮತಗಟ್ಟೆ ಸಿಬ್ಬಂದಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.ಅ.೨೮ ರಂದ ಬುಧವಾರ ನಡೆಯಲಿರುವ ಆಗ್ನೇಯ ವಿಧಾನ ಪರಿಷತ್ ಚುನಾವಣೆಯು ಶಾಂತಿಯುತವಾಗಿ ನಡೆಯಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಈ ಬಾರಿ ತಾಲೂಕಿನಲ್ಲಿ ೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಪಟ್ಟಣದ ಸರಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜಿನಲ್ಲಿ ೨ ಮತಗಟ್ಟೆಗಳು, ಮಾಸ್ತಿ, ಲಕ್ಕೂರು, ಟೇಕಲ್ ಹೋಬಳಿ ಕೇಂದ್ರಗಳಲ್ಲಿ ತಲಾ ೧ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ ೮ ರಿಂದ ಸಂಜೆ ೫ರ ವರೆಗೆ ಮತದಾನ ನಡೆಯಲಿದ್ದು, ಮತಗಟ್ಟೆಯ ಸುತ್ತಲು ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
೧ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ ಸೇರಿದಂತೆ ೫ ಮಂದಿ ಸಿಬ್ಬಂದಿ ಮತಗಟ್ಟೆಯ ಬಳಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ೫ ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ೧ ಮತಗಟ್ಟೆಗೆ ಒಬ್ಬ ಸೆಕ್ಟರ್ ಅಧಿಕಾರಿ, ಮೈಕ್ರೋ ವಿಕ್ಷಕರನ್ನು ನೇಮಿಸಲಾಗಿದೆ. ೨೫೫೮ ಮಂದಿ ಪದವಿದರ ಮತದಾರರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದು, ಪದವಿದರ ಮತದಾರರು ಯಾವುದೇ ಗೊಂದಲಗಳಿಗೆ ಒಳಗಾಗದೆ ಮತಗಟ್ಟೆಗಳಿಗೆ ಆಗಮಿಸಿ ಮತದಾರ ಗುರ್ತಿನ ಚೀಟಿಯನ್ನು ತೋರಿಸಿ ತಮ್ಮ ಮತಗಳನ್ನು ಚಲಾಯಿಸುವಂತೆ ತಿಳಿಸಿದರು.
ಚುನಾವಣೆ ಶಾಖೆಯ ಉಪತಹಶಿಲ್ದಾರ್ ಜಗನ್ನಾಥ್, ಕಂದಾಯ ಅಧಿಕಾರಿಗಳಾದ ಸುಬ್ರಮಣಿ, ಮುನಿಸ್ವಾಮಿಶೆಟ್ಟಿ, ನಾರಾಯಣಸ್ವಾಮಿ, ಹರಿಪ್ರಸಾದ್, ಚುನಾವಣೆ ಶಾಖೆಯ ಬಾಲಕೃಷ್ಣ, ಇನ್ನಿತರರು ಹಾಜರಿದ್ದರು.