
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದ ತಂಡವು “ವಿಶ್ವೇಶ್ವರಾಯತಾಂತ್ರಿಕ ವಿಶ್ವವಿದ್ಯಾಲಯದಗುಲ್ಬರ್ಗಾಅಂತರ್ ವಲಯದಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅಂತಿಮ ಪಂದ್ಯಾವಳಿಯಲ್ಲಿ ಅಂತಿಮ ಜಯ ಗಳಿಸಿತು. ಈ ಪಂದ್ಯಾವಳಿಗಳಲ್ಲಿ ಕಲಬುರ್ಗಿವಲಯದ ಒಟ್ಟು 14ತಂಡಗಳು ಭಾಗವಹಿಸಿದ್ದವು. ಫೈನಲ್ ಮ್ಯಾಚ್ ನಲ್ಲಿ , ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದ ತಂಡವು, ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿತು ಹಾಗು ಬಳ್ಳಾರಿಯ ಬಿ.ಐ.ಟಿ.ಎಂ ಇಂಜನೀರಿಂಗ್‍ಕಾಲೇಜನ್ನು ಬೌಲಿಂಗ್ ಮಾಡಲು ಬಯಸಿತು.
ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದತಂಡವು, ತಂಡವು 194 ರನ್ ಮಾಡಿದರೆ, ನಂತರ ಬ್ಯಾಟಿಂಗ್ ಮಾಡಿದ ಬಳ್ಳಾರಿಯ ಬಿ.ಐ.ಟಿ.ಎಂ ಇಂಜನೀರಿಂಗ್‍ಕಾಲೇಜನ್ನು 153ರನ್ ಗಳಲ್ಲಿ ಆಲ್-ಔಟ್ ಆದರು.
ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದತಂಡವು ಅಂತಿಮ ಜಯಗಳಿಸಿತು.
ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದತಂಡದಲ್ಲಿ ಇಮ್ಯಾನುಯಲ್ ಡಾನಿಯಲ್(ಕೆಪ್ಟನ್), ಶಿವಶಾಂತ್, ಇಬ್ರಹೀಂ, ತಿಲಕ್, ಅಭಿಷೇಕ್, ಸಂದೀಪ್, ಹರೀಷ್, ಚಂದ್ರಶೇಖರ್, ಅಜ್ಮಲ್, ಮಹೇಶ್, ಸಂಜಯ್ ಭರದ್ವಾಜ್, ರಂಜಿತ್, ಸಾಯಿಗಣೇಶ, ಪವನ್, ಮಂಜು, ಬಾಲಸುಭ್ರಮಣಿಯಮ್, ಯಶ್ವಂತ್, ಸಾಹಿತ್ಯವರ್ಮ, ಗಣೇಶ ಪಾಟೀಲ್, ಮಹಮ್ಮದ್ ವಲಿ, ಇವರು ಭಾಗವಹಿಸಿದ್ದರು.
ವಿನ್ನರ್ಸ್‍ಟ್ರೋಫಿಯನ್ನು ನೀಡುತ್ತ ಡಾ||ಕೋರಿ ನಾಗರಾಜ, ಡಾ||ಕೊಟ್ಟೂರೆಶ್ವರ ಎನ್., ಡಾ|| ಆದನ ಗೌಡ, ಪ್ರಶಾಂತ್ ಖೇಣಿ, ಪುನೀತ್ ಕುಮಾರ್, “ಈ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಅಭಿನಂದನೆಗಳು ವಿಜೇತರಿಗೆ ಇನ್ನು ಹೆಚ್ಚಿನ ಸಾಧನೆಗೈದು ನಮ್ಮ ದೇಶದ ಕ್ರಿಕೆಟ್‍ಟೀಂನಲ್ಲಿ ಸೇರ್ಪಡೆಯಾಗಲುಪ್ರಯತ್ನಿಸಬೇಕಾಗಿದೆ” ಎಂದು ಪ್ರೋತ್ಸಾಹಿಸಿದರು ಈಕಾರ್ಯಕ್ರಮದಲ್ಲಿ ನಮ್ಮಕಾಲೇಜಿನಧೈಹಿಕ ಶಿಕ್ಷಕರಾದ ವಿಜಯಮಹಂತೇಶ, ಬಿ.ಐ.ಟಿ.ಎಂ ಇಂಜನೀರಿಂಗ್‍ಕಾಲೇಜ ನ ಅಶೋಕ್.ಬಿ, ತುಮಕೂರಜೋನಲ್ ಸೆಲೆಕ್ಷನ್ ಕಮಿಟೀ ಚೈರ್ಮನ್ ಕಿಶೋರ್ ಬಾಬು, ಇನ್ನಿತರರು ಉಪಸ್ಥಿತರಿದ್ದರು.