ವಿ.ಟಿ.ಯು. ರಾಜ್ಯಮಟ್ಟದ ಪವರ್ ಲಿಫ್ಟಿಂಗ್‌ನಲ್ಲಿ ಪಿ.ಡಿ.ಐ.ಟಿ.ಯದೀಪಕ್ ಬೆಳಗಲ್‌ಗೆಚಿನ್ನದ ಪದಕ”


ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.10: ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಮೆಕ್ಯಾನಿಕಲ್ ವಿಭಾಗದ 4ನೇ ಸೆಮಿಸ್ಟರ್ ವಿದ್ಯಾರ್ಥಿ ದೀಪಕ್ ಬೆಳಗಲ್, ಸೆ.8ರಂದು ಬೆಳಗಾವಿಯ ಕೆ.ಎಲ್.ಇ ಗೋಗ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ  ವಿ.ಟಿ.ಯು. ರಾಜ್ಯಮಟ್ಟದ ಪವರ್ ಲಿಫ್ಟಿಂಗ್‌ ಸ್ಪರ್ಧೆಯಲ್ಲಿಚಿನ್ನದ ಪದಕವನ್ನು ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಪಿ.ಡಿ.ಐ.ಟಿ.ಯ ಆಡಳಿತ ಮಂಡಳಿ ಅಧ್ಯಕ್ಷರಾದ ಪಲ್ಲೇದ್ ದೊಡ್ಡಪ್ಪ, ಪಿ.ಡಿ.ಐ.ಟಿ.ಯ ಪ್ರಾಂಶುಪಾಲರಾದ ಡಾ.ಯು.ಎಂ.ರೋಹಿತ್, ಉಪಪ್ರಾಂಶುಪಾಲರಾದ ಪ್ರೊ. ಪಾರ್ವತೀ ಕಡ್ಲಿ,ಮೆಕ್ಯಾನಿಕಲ್ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎಚ್.ಮಂಜುನಾಥ್, ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕರಾದ ಕೆ.ಎಸ್.ಮಂಜುನಾಥ್, ಪ್ರಾಧ್ಯಾಪಕ ವೃಂದ ಹಾಗೂ ಸಿಬ್ಬಂದಿವರ್ಗ, ದೀಪಕ್ಬೆಳಗಲ್‌ಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.