ವಿ. ಜಿ. ಕಾಲೇಜಿನಲ್ಲಿ ಮಿನಿ ಘಟಿಕೋತ್ಸವ

ಕಲಬುರಗಿ:ನ.10: ನಗರದ ಪ್ರತಿಷ್ಠಿತ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ ಹಿಂದಿ ವಿಭಾಗದವರು ಹಮ್ಮಿಕೊಂಡ ‘ವ್ಯಾಲ್ಯೂ ಎಡ್ಡೆಡ ಕೋರ್ಸ’ ನ ಪ್ರಮಾಣ ಪತ್ರ ವಿತರಣಾ ಸಮಾರಂಭ (ಘಟಿಕೋತ್ಸವ) ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ರಾಜಭಾಷಾ ಅಧಿಕಾರಿಯಾದ ಶ್ರೀ ಶೌರ್ಯ ಚೌಧರಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪಠ್ಯಕ್ರಮದ ಅಭ್ಯಾಸ ಮಾಡುವುದು ಸಾಮಾನ್ಯವಾಗಿ ಕಾಣುತ್ತೇವೆ ಆದರೆ ವಿದ್ಯಾರ್ಥಿಗಳಲ್ಲಿ ಅವರ ರುಚಿಗೆ ಅನುಸಾರವಾಗಿ ಪಠ್ಯಕ್ರಮ ತೈಯಾರಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೋಧನೆ ಮಾಡುವುದು ಬಹಳ ಕಡಿಮೆ, ಆದರೆ ವಿ ಜಿ ಕಾಲೇಜಿನಲ್ಲಿ ಇಂತಹ ಪರಂಪರೆ ಹಾಕಿಕೊಂಡಿರುವುದು ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಸಿಗುತ್ತದೆ ಎಂದು ನುಡಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ಹಿಂದಿ ವಿಭಾಗದವರು ಹಮ್ಮಿಕೊಂಡ ಕೋರ್ಸಿನ ಉಪಯೋಗಗಳನ್ನು ಒಂದೊಂದಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.

ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಅವರು ಅತಿಥಿಗಳನ್ನು ಸ್ವಾಗತಿಸಿದ್ದರು ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನೂ ಶ್ರೀಮತಿ ಸುಷ್ಮಾ ಕುಲಕರ್ಣಿ ಅವರು ನಡೆಸಿಕೊಟ್ಟರು. ಶ್ರೀಮತಿ ಕವಿತಾ ಠಾಕೂರ ಅವರು ವಂದಿಸಿದರು, ಕುಮಾರಿ ಅಂಜಲಿ ರಾಜಪುರೋಹಿತ ಅವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಕುಮಾರಿ ಸಾಕ್ಷಿ ಪಾಟೀಲ್ ಅವರು ಪ್ರಾರ್ಥನಾ ಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ಪ್ರೊ. ರವೀಂದ್ರ ಯಾರ್ಗೊಳ, ಡಾ. ಜ್ಯೋತಿ ಪ್ರಕಾಶ್, ಡಾ. ಸುಭಾಷ್ ದೊಡ್ಡಮನಿ, ಡಾ. ಉಸ್ತಾದ್ ರಬ್, ಶಿವಲೀಲಾ ಧೋತ್ರೇ, ಶರಣಮ್ಮ ಕುಪ್ಪಿ, ಅಶ್ವಿನಿ, ಮೇಘನಾ, ಸಂಗಮೇಶ್, ಡಾ. ನಾಗರತ್ನ ಉಪಸ್ಥಿತರಿದ್ದರು.