ವಿ.ಕೃಷ್ಣರಿಗೆ ಅತ್ಯುನ್ನತ ಛಾಯಾ ಭೂಷಣ ಪ್ರಶಸ್ತಿ

ಕೋಲಾರ,ಆ.೩-ಕೋಲಾರ ಜಿಲ್ಲಾ ಛಾಯಾಗ್ರಾಹಕ ಮತ್ತು ವೀಡಿಯೋ ಗ್ರಾಹಕರ ಸಂಘದ ಅಧ್ಯಕ್ಷರು ಹಾಗೂ ಕೆಪಿಎ ಮಾಜಿ ನಿರ್ದೇಶಕ ವಿ.ಕೃಷ್ಣ ,ಅವರು ಕರ್ನಾಟಕ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘ ನೀಡುವ ಅತ್ಯುನ್ನತ ಛಾಯಾ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಯು ಇದೇ ತಿಂಗಳು ೧೯ ನೇ ದಿನಾಂಕದಂದು ನಡೆಯುವ ೧೮೪ ನೇ ವಿಶ್ವ ಛಾಯಾಗ್ರಹಣ ದಿನದಂದು ಬೆಂಗಳೂರಿನ ಅಖಿಲಭಾರತ ವೀರಶೈವ ಮಹಾ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಈ ಸಮಾರಂಭದಲ್ಲಿ ಕೆಪಿಎ ಮಾಜಿ ನಿರ್ದೇಶಕರಾದ ಕೆ.ಸಂಪತ್ ಕುಮಾರ್, ಡಿ.ವಿಜಯರಾಘವನ್, ತುಮಕೂರು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಭಕ್ತವತ್ಸಲ ಹಾಗೂ ರಾಯಚೂರು ಹಿರಿಯ ಛಾಯಾಗ್ರಾಹಕ ಇನಾಂದಾರ್ ಅವರಿಗೂ ಸಹ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.