ವಿ.ಎಸ್ ಆರ್ ಕಾನೂನು ಕಾಲೇಜು ವಿದ್ಯಾರ್ಥಿಗಳಿಂದ
ರೂಪನಗುಡಿಯಲ್ಲಿ ನಾಟಕದ ಮೂಲಕ ಜಾಗೃತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.30: ವೀರಶೈವ ವಿದ್ಯಾವರ್ಧಕ ಸಂಘದ ವುಂಕಿ ಸಣ್ಣ ರುದ್ರಪ್ಪ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು  ತಾಲೂಕಿನ  ರೂಪನಗುಡಿ ಗ್ರಾಮದಲ್ಲಿ ಸ್ಥಳೀಯ ಗ್ರಾಮ  ಪಂಚಾಯತಿ ಸಹಯೋಗದೊಂದಿಗೆ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಜು 27 ರಂದು ಹ  ಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ   ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ನಾಗರಾಜ,  ಕಾರ್ಯಕ್ರಮದ  ಸಂಯೋಜಕಿ  ಹಾಗೂ ಸಹ ಪ್ರಾಧ್ಯಾಪಕಿ ಹೆಚ್. ಚಂದ್ರಿಕಾ , ಪಿಡಿಓ ಪ್ರಕಾಶ ಅಮರಶೆಟ್ಟಿ  ಪಾಲ್ಗೊಂಡಿದ್ದರು.
ವಿ.ಎಸ್.ಆರ್. ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಕಿರು ನಾಟಕಗಳ ಪ್ರದರ್ಶನದ ಮೂಲಕ  ಸಾರ್ವಜನಿಕರಿಗೆ ಪರಿಸರದ ರಕ್ಷಣೆ, ಲೋಕ್ ಅಧಾಲತ್, ವರದಕ್ಷಿಣೆ ಹಾಗೂ ಬಾಲ್ಯವಿವಾಹದಿಂದಾಗುವ ತೊಂದರೆಗಳನ್ನು ವಿವರಿಸಿ, ಕಾನೂನಿನ ಅರಿವು ಮೂಡಿಸಿದರು.