ವಿ.ಎಂ. ರಾಂಪುರೆ ಶಾಲೆ: ಮಕ್ಕಳ ದಿನಾಚರಣೆ

ಬೀದರ್: ನ.15:ತಾಲ್ಲೂಕಿನ ಹಮಿಲಾಪುರ ಗ್ರಾಮದ ವಿ.ಎಂ. ರಾಂಪುರೆ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಶಾಲೆಯ ಅಧ್ಯಕ್ಷ ಮಹೇಶ ಎಸ್. ರಾಂಪುರೆ ಅವರು ನೆಹರೂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು.
ಪ್ರಾಚಾರ್ಯೆ ಶೈಲಜಾ ಡಿ. ಗುಪ್ತಾ, ಮುಖ್ಯಶಿಕ್ಷಕಿ ಅಂಬಿಕಾ ವಿ. ರಾಂಪುರೆ, ಶಿಕ್ಷಕಿಯರಾದ ಮೀನಾಕ್ಷಿ ಪಾಟೀಲ, ನಿಕಿತಾ ಕುಂದೆ, ತ್ರಿವೇಣಿ ಜಮಗೆ, ಪ್ರಿಯಾ ದೇವದುರ್ಗ, ನಂದಿನಿ, ಶ್ರುತಿ, ಸುನಿತಾ, ಸಿಬ್ಬಂದಿ ಸಂಗೀತಾ, ಆಕಾಶ, ದಿನೇಶ್ ಸೋನಿ ಇದ್ದರು.