ವಿ.ಎಂ.ಬಾಗಾಯತ ಇವರಿಗೆ ದೃಶ್ಯಕಲಾ ಸಂಶೋಧಕ ರಾಜ್ಯ ಪ್ರಶಸ್ತಿ

ವಿಜಯಪುರ, ಜು.30-ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ಧಾರವಾಡ ಇವರು “ದೃಶ್ಯಕಲಾ ಸಂಶೋಧನೆಯ’ ರಾಜ್ಯ ಪ್ರಶಸ್ತಿಯನ್ನು ಹಿರಿಯ ದೃಶ್ಯಕಲಾ ಸಂಶೋಧಕರು, ಇತಿಹಾಸ ತಜ್ಞರು ಹಾಗೂ ಸಾಹಿತಿಗಳಾದ ವಿಜಯಪುರದ ಡಾ. ವ್ಹಿ.ಎಂ. ಬಾಗಾಯತ ನಿವೃತ್ತ ಉಪನ್ಯಾಸಕರಿಗೆ ದಿನಾಂಕ 24-7-2022 ಶನಿವಾರದಂದು ಸರಕಾರಿ ಆಟ್ರ್ಸ ಗ್ಯಾಲರಿ ಧಾರವಾಡದಲ್ಲಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಮ.ನಿ.ಪ್ರ. ಜಗದ್ಗುರು ಕುಮಾರ ವಿರುಪಾಕ್ಷೇಶ್ವರಮಹಾಸ್ವಾಮಿಗಳು, ಮೂರುಸಾವಿರ ವಿರಕ್ತಮಠ, ಉಪ್ಪಿನಬೆಟಗೇರಿ ಇವರು ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ಚಂದ್ರಶೇಖರ ಬೆಲ್ಲದ, ಡಾ. ಎಸ್.ಸಿ. ಪಾಟೀಲ, ನಿವೃತ್ತ ಡಿವಾಯ್‍ಎಸ್ಪಿ ಬಿ.ಡಿ. ಪಾಟೀಲ, ಡಾ. ಚಂದ್ರಶೇಖರ ರೊಟ್ಟಿಗವಾಡ ನಿರ್ದೇಶಕರು ಪ್ರಸಾರ ರಂಗ ಗವಿವಿ ಧಾರವಾಡ, ಲಕ್ಷ್ಮಣ ತೆಲಗಾಂವಿ ವಿಶ್ರಾಂತ ಪ್ರಾಧ್ಯಾಪಕರು ಕನ್ನಡ ವಿವಿ ಹಂಪಿ, ಡಾ. ವಿ.ಎಲ್. ಪಾಟೀಲ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು ಜಾನಪದ ಅಧ್ಯಯನ ವಿಭಾಗ ಕರ್ನಾಟಕ ವಿವಿ ಧಾರವಾಡ, ಶ್ರೀಮತಿ ಹನುಮಾಕ್ಷಿ ಗೋಗಿ, ಡಾ.ಎಸ್.ಕೆ. ಮೇಲಕಾರ ನಿರ್ದೇಶಕರು ಕನ್ನಡ ಸಂಶೋಧನ ಸಂಸ್ಥೆ ಕವಿವಿ ಧಾರವಾಡ ಡಾ.ಲೋಕೋಶ ಮುಖ್ಯಸ್ಥರು ಪ್ರಾಚೀನ ಇತಿಹಾಸ ಮತ್ತು ಶಾಸನ ಶಾಸ್ತ್ರ ವಿಭಾಗ ಕವಿವಿ ಧಾರವಾಡ ಡಾ.ಮೋಹನರಾವ ಜಿ. ಪಂಚಾಳ, ಡಾ.ಜಿ. ಎಸ್.ಬೂಸಗೊಂಡ ಮುಂತಾದವರು ಉಪಸ್ಥಿತರಿದ್ದರು.