ವಿಷ ಹೊರಸೂಸುವ ಕಾರ್ಖಾನೆಗಳು ಬಂದ್‌: ಈಶ್ವರ ಖಂಡ್ರೆ

ಬೀದರ್: ಜು.24:’ಬೀದರ್‌, ಹುಮನಾಬಾದ್‌ ತಾಲ್ಲೂಕಿನ ರಾಸಾಯನಿಕ ಕಾರ್ಖಾನೆಗಳಿಂದ ನೆಲ, ಜಲ ವಿಷವಾಗುತ್ತಿದೆ ಎಂಬ ಮಾಹಿತಿ ಇದೆ. ಅದು ಸಾಬೀತಾದರೆ ಅಂತಹ ಕಾರ್ಖಾನೆಗಳನ್ನು ಬಂದ್‌ ಮಾಡಿಸಲು ಆದೇಶ ಹೊರಡಿಸಲಾಗುವುದು’ ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.

‘ರಾಸಾಯನಿಕ ಕಾರ್ಖಾನೆಗಳು ಯಾವುದೇ ರೀತಿಯ ಸಂಸ್ಕರಣೆ ಮಾಡದೆ ವಿಷಕಾರಿ ತ್ಯಾಜ್ಯ ಬಿಡುತ್ತಿದ್ದಾರೆ ಎಂಬ ವರದಿಗಳಿವೆ. ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈಗಾಗಲೇ ಆ ಕೆಲಸ ಆರಂಭವಾಗಿದೆ. ಅವರ ವರದಿ ಇಷ್ಟರಲ್ಲೇ ಕೈಸೇರಲಿದೆ. ಕಾರ್ಖಾನೆಗಳು ವಿಷಕಾರಕ ತ್ಯಾಜ್ಯ ಬಿಡುತ್ತಿದ್ದರೆ ಅವುಗಳನ್ನು ಮುಚ್ಚಿಸಲಾಗುವುದು. ರಾಜ್ಯದ ಯಾವುದೇ ಭಾಗದಲ್ಲಿ ಇಂತಹ ಕಾರ್ಖಾನೆಗಳಿಗೆ ಪ್ರೋತ್ಸಾಹ ಸಿಗುವುದಿಲ್ಲ. ಪರಿಸರಸ್ನೇಹಿ ಕಾರ್ಖಾನೆಗಳಿಗೆ ನಮ್ಮ ಸರ್ಕಾರ ಪ್ರೋತ್ಸಾಹ ನಿಡಲಿದೆ’ ಎಂದು ನಗರದಲ್ಲಿ ಭಾನುವಾರ ತಿಳಿಸಿದರು.