
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.09 ತಾಲೂಕಿನ ಉಪ್ಪಿನಾಯಕನಹಳ್ಳಿ ಗ್ರಾಮದ ಹತ್ತಿರ ಕಬ್ಬಿನ ಗದ್ದೆಯ ಪಕ್ಕದಲ್ಲಿ ಬೆಳೆದ ವಿಷಪೂರಿತ ಬಳ್ಳಿಯನ್ನು ಸೇವಿಸಿ 49 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದು ನಾಲ್ಕು ತಿಂಗಳಾದರೂ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವುದನ್ನು ವಿರೋಧಿಸಿ ತಾಲೂಕ ಕುರುಬ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಕುರುಬ ಸಮಾಜದ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ ಕುರಿಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಪರಿಹಾರಕ್ಕೆ ಮನವಿ ಸಲ್ಲಿಸಿ ನಾಲ್ಕು ತಿಂಗಳಾದರೂ ಕುರಿಗಾಹಿಗಳಿಗೆ ಪರಿಹಾರ ನೀಡದೆ ಕುರಿಗಾಹಿಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಕ್ಷೇತ್ರದ ಶಾಸಕರ ನಿರ್ಲಕ್ಷ ದೋರಣೆ ಎದ್ದು ಕಾಣುತ್ತಿದೆ. ಕೂಡಲೇ ತಕ್ಷಣ ಪ್ರತಿ ಕುರಿಗೆ 5000 ಕೊಡಬೇಕು.ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಇದಲ್ಲದೆ ಚುನಾವಣಾ ನೀತಿ ಸಮಿತಿ ಜಾರಿಗೆ ಬರುತ್ತದೆ ಆದರಿಂದ ಇದೇ ತಿಂಗಳು ,24 ನೇ ತಾರೀಖು ಒಳಗಾಗಿ 49 ಕುರಿಗಳಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಉಪ ತಹಶೀಲ್ದಾರ್ ವಿಶ್ವನಾಥಯ್ಯ ಮನವಿ ಸ್ವೀಕರಿಸಿದರು.
ಸಮಾಜದ ಧರ್ಮದರ್ಶಿ ಬಣಕಾರ್ ಗೋಣೆಪ್ಪ ಮುಖಂಡ ಮುಟಗನಹಳ್ಳಿ ಕೊಟ್ರೇಶ್, ಮಾತನಾಡಿದರು ಈ ಸಂದರ್ಭದಲ್ಲಿ ಬಿಕೆ ಬಸವರಾಜ್, ಮಲ್ಲೇಶ್, ದೊಡ್ಡಬಸಪ್ಪ, ನಾಗರಾಜ್, ಪ್ರಭಾಕರ್, ರಾಮು,, ದೊಡ್ಡಬಸಪ್ಪ, ತಂಬ್ರಹಳ್ಳಿ ರವಿ, ದಾನಪ್ಪ, ಮಾರುತಿ, ಗೋಣೆಪ್ಪ,ಬಿಕೆ ಬಸವರಾಜ್, ಮಧುಸೂದನ್, ಪ್ರಕಾಶ್, ಹುಲುಗಪ್ಪ ರಾಮು ಕಂಬಳಿ ಜಂಬಣ್ಣ ಕೊಟ್ರೇಶ್, ವಿ ಕುಮಾರಪ್ಪ, ಮಾರುತಿ, ದೇವೇಂದ್ರಪ್ಪ, ಜಗದೀಶ್, ವೆಂಕಟೇಶ್, ಕನಕಪ್ಪ, ರವಿ ಇತರರಿದ್ದರು.