ವಿಷ್ಣು ಸಹಸ್ರನಾಮ ಭವನದಲ್ಲಿ ಅಖಂಡ ಶ್ರೀಮದ್ಭಾಗವತ ಜ್ಞಾನ ಯಜ್ಞ

ವಿಜಯಪುರ, ಜು.15-ಆಷಾಢ ಶಯನಿ ಏಕಾದಶಿ ಪ್ರಯುಕ್ತ ಇಲ್ಲಿಯ ವಿಶ್ವ ಮಾಧ್ವ ಪರಿಷತ್ ವಿಜಯಪೂರ ಘಟಕ ಹಾಗೂ ವ್ಯಾಸ ಮದ್ವ ಸಂಸ್ಕøತ ವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಈಚೆಗೆ ನಗರದ ತೊರವಿ ರಸ್ತೆಯ ಶ್ರೀ ವೆಂಕಟೇಶ್ವರ ದೇವರ ಸನ್ನಿಧಾನದ ವಿಷ್ಣು ಸಹಸ್ರನಾಮ ಭವನದಲ್ಲಿ ವಿವಿಧ ಪಂಡಿತರಿಂದ ಶ್ರೀಮದ್ಭಾಗವತ ಜ್ಞಾನ ಸತ್ರ ನಡೆಯಿತು.
ಕಳೆದ 13 ವರ್ಷಗಳಿಂದ ಇಲ್ಲಿ ಆತ್ಮೋದ್ದಾರ ಭಗವದನುಗ್ರಾಹಕ್ಕಾಗಿ, ವಿಶ್ವಕಲ್ಯಾಣ, ಸಕಲರ ಆಯುರಾರೋಗ್ಯ ಐಶ್ವರ್ಯ ಸಾಧನೆಗಳ ಸಾಧನೆಗಳ ಪ್ರಾಪ್ತಿಗಾಗಿ ಶ್ರೀ ಕೃಷ್ಣ ಪ್ರಿಯಕರವಾದ ವೈಭಯೋಪೇತವಾಗಿ ನಡೆಯುತ್ತಿರುವ ಈ ಕಾರ್ಯವು ಧರ್ಮದರ್ಶಿ ಪಂಡಿತ ವೇದನಿಧಿ ಆಚಾರ್ಯರ ನೇತೃತ್ವದಲ್ಲಿ ವಿವಿಧ ನಗರಗಳಿಂದ ಅಗಮಿಸಿದ ಪಂಡಿತರು 12 ಸ್ಕಂದಗಳ ಜ್ಞಾನದ ಸವಿ ಉಣ ಬಡಿಸಿದರು.
ಬೆಳಿಗ್ಗೆ 7 ಗಂಟೆಗೆ ಪಂ ಕಶ್ಯಪಾಚಾರ್ಯ ಗೊರನಾಳರಿಂದ ಪ್ರಾರಂಭವಾದ ಜ್ಞಾನ ಸತ್ರ ನಗರದ ಹಿರಿಯ ವಿದ್ವಾಂಸರಾದ ಪಂ ಶ್ರೀಶಾಚಾರ್ಯ ಸೂಳಿಭಾವಿಯರ ಪ್ರವಚನದ ಬಳಿಕ ರಾತ್ರಿ 8.30 ಕ್ಕೆ ಹರಿವಾಣ ಸೇವೆಯೊಂದಿಗೆ ಸಂಪನ್ನಗೊಂಡಿತು.
ಜ್ಞಾನಸತ್ರದಲ್ಲಿ ಸುಮಾರು 70 ಕ್ಕಿಂತ ಹೆಚ್ಚು ಜನ ಸತತವಾಗಿ 13 ಗಂಟೆಗಳ ವರಗೆ ಉಪವಾಸದಿಂದ ಭಾಗವತದ ಸವಿ ಪಡೆದರು. ಒಟ್ಟಾರೆ 700 ಕ್ಕೂ ಹೆಚ್ಚು ಇದರಲ್ಲಿ ಭಾಗವಹಿಸಿದ್ದು ವಿಶೇಷ ವಾಗಿತ್ತು.
ಜ್ಞಾನ ಸತ್ರದಲ್ಲಿ ಆನಂದ ಜೋಶಿ, ಡಾ. ಗಿರೀಶ ಅಕಮಂಚಿ, ಪ್ರಹ್ಲಾದ ಬಾಗೇವಾಡಿ, ಶ್ರೀನಿವಾಸ ಕುಲಕರ್ಣಿ, ಅರ್ ಕೆ ದೇಸಾಯಿ, ಆರ್ ಜಿ ದೇಸಾಯಿ, ಬಾಬುರಾವ ಕುಲಕರ್ಣಿ, ವಿಠ್ಠಲರಾವ ಬಾಬಾನಗರ, ವಿಜಯಿಂದ್ರ ಮೊಖಾಶಿ, ಎಮ್ ಕೆ ಜೋಶಿ ಇನ್ನೂ ಅನೇಕ ಸದ್ಭಕ್ತರು ಭಾಗವಹಿಸಿದ್ದರು.