ವಿಷ್ಣು ಜಯಂತಿಯಲ್ಲಿ ಬಳ್ಳಾರಿ ಅಭಿಮಾನಿ ಪಂಪಾಪತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.19: ಡಾ.ವಿಷ್ಣುವರ್ಧನ್ ಅವರ 72ನೇ ಹುಟ್ಟುಹಬ್ಬವನ್ನು  ಅಭಿಮಾನಿಗಳು ಸಂಭ್ರಮ, ಸಡಗರದಿಂದ ನಿನ್ನೆ ಆಚರಿಸಿದರು. ಅಭಿಮಾನ  ಸ್ಟುಡಿಯೋದಲ್ಲಿನ ಅವರ ಸ್ಮಾರಕದ ಸುತ್ತ 51 ಕಟ್‌ ಗಳನ್ನು ನಿರ್ಮಿಸಿ ಸಂಭ್ರಮಿಸಿದರು. ಇದರಲ್ಲಿ ಬಳ್ಳಾರಿ ಜಿಲ್ಲೆಯ ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಪಂಪಾಪತಿ ಟಿ.ಎಂ ಅವರು ವಿಷ್ಣುವರ್ಧನ ಅವರ ಕಟೌಟ್ ನಿರ್ಮಿಸಿ ತಮ್ಮ ಅಭಿಮಾನ ಮೆರೆದರು.‌
ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವೀರಕಪುತ ಶ್ರೀನಿವಾಸ್ ಮತ್ತು ಅಭಿಮಾನಿಗಳು ಕೇಕ್ ಕಟ್ ಮಾಡಿ, ಅನ್ನದಾನ ಕಾರ್ಯಕ್ರಮ, ರಕ್ತದಾನ ಶಿಬಿರವನ್ನೂ ಹಮ್ಮಿಕೊಂಡಿದ್ದರು, ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಜತೆ ಕನ್ನಡ ಚಿತ್ರರಂಗದ ಕೆಲವು ಪ್ರಮುಖರು ಸಹ ಡಾ. ವಿಷ್ಣುವರ್ಧನ್ ಸ್ಮಾರಕಕ್ಕೆ ವಂದಿಸಿದರು.
ಅಭಿಮಾನಿಗಳ ಸಂಭ್ರಮ ನೋಡಿ ಖುಷಿಯಾಗಿದೆ. ಪ್ರತಿ ಕ್ಷಣವೂ ವಿಷ್ಣುವರ್ಧನ್ ನಮ್ಮ ಜತೆಯಲ್ಲೇ ಇದ್ದಾರೆ. ಕರೋನಾ ಸಂದರ್ಭದಲ್ಲಿ ಇಲ್ಲಿಗೆ ಬರಲಾಗದೆ ಬೇಸರವಾಗಿತ್ತು. ಆದರೆ, ಈ ವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ವಿಷ್ಣುವರ್ಧನ್ ಅಭಿನಯದ ಸಿನಿಮಾಗಳ ‘ಕಟೌಟ್ ನೋಡಿ ಖುಷಿಯಾಯಿತು, ಅವರ ಅಭಿಮಾನಿಗಳ ಪ್ರೀತಿಗೆ ನಾವೆಲ್ಲರೂ ಋಣಿ’ ಎಂದು ನಟ ರಮೇಶ್ ಭಟ್ ಈ ಸಂದರ್ಭದಲ್ಲಿ  ಹೇಳಿದರು