ವಿಷ್ಣುವರ್ಧನ್‍ರವರ ಪುಣ್ಯ ಸ್ಮರಣೆ

ಮೈಸೂರು:ಡಿ:30: ಸಾಹಸಸಿಂಹ ಡಾ. ವಿಷ್ಣುವರ್ಧನ್‍ರವರು ನಮ್ಮ ಮೈಸೂರಿನವರು ಎಂದು ಹೇಳಲು ಇಡೀ ಮೈಸೂರಿಗೆ ಹೆಮ್ಮೆ ಎಂದು ಮೈಸೂರು ಪ್ರಾಧಿಕಾರ ಅಧ್ಯಕ್ಷ ಹೆಚ್.ವಿ. ರಾಜೀವ್ ಸ್ಮರಿಸಿದರು.
ನಗರದ ವಿಷ್ಣುವರ್ಧನ್ ಉದ್ಯಾನವನದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗ ವತಿಯಿಂದ ಅಭಿನಯ ಭಾರ್ಗವ ಸಾಹಸಸಿಂಹ ಡಾ. ವಿಷ್ಣುವರ್ಧನ್‍ರವರ 11ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿ ಮಾತನಾಡಿ, ವಿಷ್ಣುವರ್ಧನ್‍ರವರು ತಮ್ಮ ಜೀವನದುದ್ದಕ್ಕೂ ಸಹನಾಮೂರ್ತಿ ಸ್ನೇಹ ಜೀವಿಯಾಗಿದ್ದವರು. ಅವರು ನಿಟಿಸಿರುವ ಎಲ್ಲಾ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೈಸೂರಿನಲ್ಲೇ ಹಲವಾರು ಚಿತ್ರಗಳ ಚಿತ್ರಿಕರಣವಾಗಿದೆ. ವಿಷ್ಣುರವರು ತಮ್ಮ ಹೆಚ್ಚು ಸಮಯವನ್ನು ಮೈಸೂರಿನಲ್ಲೇ ಕಳೆಯುತ್ತಿದ್ದರು. ಆದರೆ ವಿಪರ್ಯಾಸವೇನೆಂದರೆ ಸಾಹಸಸಿಂಹ ಹುಟ್ಟಿದ ಊರಿನಲ್ಲೇ ತಮ್ಮ ಜೀವವನ್ನು ಬಿಟ್ಟಿದ್ದು. ತಮ್ಮ ಹೆತ್ತ ತಂದೆ-ತಾಯಿಯ ಪುಣ್ಯಸ್ಮರಣೆಯನ್ನು ಮಾಡುತ್ತಾರೋ ಇಲ್ಲವೋ, ಆದರೆ ಪ್ರತಿವರ್ಷ ವಿಷ್ಣುರವರ ಪುಣ್ಯಸ್ಮರಣೆ ನಡೆದುಕೊಂಡು ಬರುತ್ತಿದ್ದು ಇದರಲ್ಲೇ ತಿಳಿಯುತ್ತದೆ ವಿಷ್ಣುವರ್ಧನ್‍ರವರು ತಮ್ಮ ಅಭಿಮಾನಿಗಳ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದ್ದಾರೆಂದು. ಇಂದು ನಗರದ 100 ಸ್ಥಳಗಳಲ್ಲಿ ವಿಷ್ಣು ಅಭಿಮಾನಿಗಳಿಂದ ಈ ಪುಣ್ಯಸ್ಮರಣೆ ನಡೆಯುತ್ತಿದ್ದು, ಇನ್ನು ಎಷ್ಟೇ ವರ್ಷಗಳು ಕಳೆದರು ಅವರ ಮೇಲಿರುವ ಪ್ರೀತಿ ಅಭಿಯಾನ ಎಂದೆಂದೂ ಹೀಗೆಯೇ ಇರಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಹಾಗೂ ಅರಣ್ಯ ಸಚಿವರಾದ ಎಂ. ವಿಜಯಶಂಕರ್, ನಗರಪಾಲಿಕೆ ಸದಸ್ಯ ಸತೀಶ್, ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಸೇರಿದಂತೆ ವಿಷ್ಣುವರ್ಧನ್‍ರವರ ಅಭಿಮಾನಿಗಳು ಭಾಗವಹಿಸಿದ್ದರು.