ಕನ್ನಡ ಮತ್ತು ಮಲೆಯಾಳಂ ಭಾಷೆಯಲ್ಲಿ ತಯಾರಾಗಿರುವ “ವಿಷ್ಣುಪ್ರಿಯ” ಚಿತ್ರ ತೆರೆಗೆ ಬರುವುದು ವಿಳಂಬವಾಗಿದೆ. ಹೀಗಾಗಿ ಬಿಡುಗಡೆ ಮಾಡುವಂತೆ ನಟ ಶ್ರೇಯಸ್,ನಿರ್ಮಾಪಕ ಕೆ.ಮಂಜು ಅವರ ಮೇಲೆ ಒತ್ತಡ ಹಾಕಿದ್ದಾರೆ. ಅಲ್ಲದೆ ವಿಷ್ಣು ಪ್ರಿಯ ಚಿತ್ರ ಬಿಡುಗಡೆಯಾಗದೆ ಮತ್ತೊಂದು ಚಿತ್ರಕ್ಕೆ ಡೇಟ್ ಕೊಡುವುದಿಲ್ಲ ಎನ್ನುವ ಷರತ್ತನ್ನು ಶ್ರೇಯಸ್ ಹಾಕಿದ್ದಾರೆ.
ಹೋಮ್ ಬ್ಯಾನರ್‍ನಲ್ಲಿ ಚಿತ್ರ ಮೂಡಿಬಂದಿದೆ. ಮನೆಯಲ್ಲಿ ಮಾತ್ರ ಅಪ್ಪ-ಮಗ, ಚಿತ್ರೀಕರಣ ಸೆಟ್‍ಗೆ ಬಂದರೆ ಶ್ರೇಯಸ್ ನಟ, ನಾನು ನಿರ್ಮಾಪಕ ಎಂದರು ಕೆ.ಮಂಜು.
ಚಿತ್ರ ಬಿಡುಗಡೆ ಮಾಡುವಂತೆ ನಮ್ಮ ನಾಯಕ ಒತ್ತಡ ಹಾಕಿದ್ದಾರೆ.ಚಿತ್ರ ಬಿಡುಗಡೆಯಾಗದೆ ಬೇರೆ ಚಿತ್ರಕ್ಕೆ ಡೇಟ್ ಕೊಡುವುದಿಲ್ಲ ಎಂದಿದ್ದಾರೆ.ಹೀಗಾಗಿ ಜೂನ್ ತಿಂಗಳಲ್ಲಿ ತೆರೆಗೆ ತರುವ ಉದ್ದೇಶ ಹೊಂದಲಾಗಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಜೊತೆಗೆ ಕ್ಲೈಮಾಕ್ಸ್ ನಾಯಕನಿಗೆ ಇಷ್ಟವಾಗದ ಹಿನ್ನೆಲೆಯಲ್ಲಿ ಮತ್ತೆ ಚಿತ್ರೀಕರಣ ಮಾಡಿದ್ದೇವೆ ಎಂದರು.
ನಾನೊಬ್ಬ ಬ್ಯುಸಿನೆಸ್ ಮಾನ್ ಮಗ ಚಿತ್ರಕ್ಕೆ ಡೇಟ್ ಕೊಡದಿದ್ದರೆ ಬೇರೆ ನಟರನ್ನು ಸಂಪರ್ಕ ಮಾಡುತ್ತೇನೆ. ಅವರ ಜೊತೆ ಸಿನಿಮಾ ಮಾಡ್ತೇನೆ. ಮಗ ಅಂತ ಪಕ್ಸಟ್ಟೆ ನಟಿಸಿಲ್ಲ ಸಂಭಾವನೆ ನೀಡಿದ್ದೇನೆ ಎಂದರು.
ನಟ ಶ್ರೇಯಸ್ ಮಾತನಾಡಿ, ಚಿತ್ರ ಬಿಡುಗಡೆ ಮಾಡುವಂತೆ ಹಲವು ಬಾರಿ ಒತ್ತಡ ಹೇರಿದ್ದೇನೆ. ನಮ್ಮ ಅಪ್ಪ ಮಗ ಅಂತ ಚಿತ್ರಕ್ಕೆ ಬಂಡವಾಳ ಹಾಕಿಲ್ಲ.ಚಿತ್ರ ಒಪ್ಪಿಕೊಂಡಾಗ ಯಾಕಾದ್ರೂ ಒಪ್ಪಿಕೊಂಡೊನೋ ನಿರ್ದೇಶಕ ನನ್ನ ಹಾಳ್ ಮಾಡ್ತಾನೆ ಅಂದುಕೊಂಡೆ. ಚಿತ್ರ ನೋಡಿ ಖುಷಿ ಆಗಿ ನಿರ್ದೇಶಕ ಕಾಲಿಗೆ ಬಿದ್ದೆ ಎಂದರು.
ನಾನ್ ರಿಮೇಕ್ ಮಾಡಲ್ಲ ಎಂದು ನಟ ಶ್ರೇಯಸ್ ಹೇಳಿದರೆ ಯಾವ ನಟನೂ ಕೂ ರಿಮೇಕ್ ಮಾಡುವುದಿಲ್ಲ ಎಂದು ಹೇಳಬಾರದು.ಕಥೆ ತೆಗದುಕೊಂಡು ತಮಗೆ ಬೇಕಾದಂತೆ ಮಾಡಿಕೊಳ್ಳಬೇಕು ಎಂದರು ನಿರ್ಮಾಪಕ ಮಂಜು. ಪತ್ರಿಕಾಗೋಷ್ಠಿ ಅಪ್ಪನ ಮಗನ ಜುಗಲ್ ಬಂದಿ,ಆರೋಪ ಪತ್ಯಾರೋಪಕ್ಕೆ ವೇದಿಕೆಯಾಗಿತ್ತು.