“ವಿಷ್ಣುಪ್ರಿಯ” ಚಿತ್ರದ ಪ್ರೇಮಗೀತೆ  ಅನಾವರಣ

ಯುವನಟ ಶ್ರೇಯಸ್ ಮಂಜು ಲವರ್ ಬಾಯ್ ವಿಷ್ಣು ಆಗಿ  ಕಾಣಿಸಿಕೊಂಡಿರುವ “ ವಿಷ್ಣು ಪ್ರಿಯ” ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಏಪ್ರಿಲ್‍ನಲ್ಲಿ  ಪ್ರೇಕ್ಷಕರೆದುರು ಬರಲಿದೆ

ಕಣ್ಸನೆ ಹುಡುಗಿ ಪ್ರಿಯಾ ವಾರಿಯರ್ ನಟಿಸಿದ್ದು ಹೀಗಾಗಿ ಚಿತ್ರದ ಬಗ್ಗೆ ಒಂದಷ್ಟು ಕುತೂಹಲ ಹೆಚ್ಚಾಗಿದೆ. ವಿಷ್ಣುಪ್ರಿಯ ಚಿತ್ರ 1990ರ  ಕಾಲದಲ್ಲಿ ನಡೆದ ಮಾಸ್ ಲವ್ ಸ್ಟೋರಿಯ ತಿರುಳು ಹೊಂದಿರುವ ಕಥೆಯನ್ನು   ನಿರ್ದೇಶಕ ವಿ.ಕೆ. ಪ್ರಕಾಶ್  ತೆರೆಗೆ ಕಟ್ಟಿಕೊಡಲು ಮುಂದಾಗಿದ್ದಾರೆ.

ಚಿತ್ರದ ಮೊದಲ ಪ್ರೇಮ ಗೀತೆಯನ್ನು  ನಟ ಶರಣ್ ಹಾಗೂ ನಟಿ ರುಕ್ಮಿಣಿ ವಸಂತ್ ಸೇರಿ  ನಾಗೇಂದ್ರ ಪ್ರಸಾದ್ ನಿರ್ಮಾಪಕರಾದ ರಮೇಶ್ ರೆಡ್ಡಿ, ಚೇತನ್ ಕುಮಾರ್ , ಸೂರಪ್ಪಬಾಬು, ಅಲ್ಲದೆ ನಿರ್ದೇಶಕರಾದ ಗುರು ದೇಶಪಾಂಡೆ, ದಯಾಳ್ ಪದ್ಮನಾಬನ್, ಭರ್ಜರಿ ಚೇತನ್, ಸತ್ಯಪ್ರಕಾಶ್, ಮಹೇಶ್ ಕುಮಾರ್,  ನಟ ವಿಕ್ರಂ ರವಿಚಂದ್ರನ್ ಬಿಡುಗಡೆ ಮಾಡಿ ಶುಭ ಹಾರೈಸಿದರು

ನಿರ್ಮಾಪಕ ಕೆ.ಮಂಜು ಮಾತನಾಡಿ ಮಗನನ್ನು ಚಿತ್ರರಂಗದಲ್ಲಿ ಬೆಳೆಸಲು ನಿರ್ದೇಶಕರನ್ನು ನಂಬಿದ್ದೇನೆ. ಈಗಿನ ಕೆಲ ನಿರ್ದೇಶಕರಿಗೆ ಜವಾಬ್ದಾರಿ ಇಲ್ಲ. ನಿರ್ಮಾಪಕ ದುಡ್ಡನ್ನು ಎಲ್ಲಿಂದ ತಂದು ಹಾಕ್ತಾನೆ ಅಂತ  ಅರ್ಥಮಾಡಿಕೊಳ್ಳಬೇಕು. ಚೆನ್ನಾಗಿ ಬರಬೇಕೆಂಬ ಕಾರಣದಿಂದ  ಸಿನಿಮಾ ತಡವಾಗಿದೆ.ಪ್ರೇಮಿಗಳಿಗೆ ಸಿನಿಮಾನ  ತೋರಿಸುತ್ತೇನೆ. ಶಿವರಾತ್ರಿಗೆ ಅಥವಾ ಏಪ್ರಿಲ್ 5ಕ್ಕೆ ರಿಲೀಸ್ ಮಾಡಬೇಕೆನ್ನುವ ಉದ್ದೇಶವಿದ ಎಂದರು

ರಾಷ್ಟ್ರಪ್ರಶಸ್ತಿ ವಿಜೇತ ವಿ.ಕೆ. ಪ್ರಕಾಶ್ ಅವರ ನಿರ್ದೇಶನದ ಚಿತ್ರದಲ್ಲಿ ಕೌಟುಂಬಿಕ ಮೌಲ್ಯಗಳ ಹಿನ್ನೆಲೆಯ ವಿಶಿಷ್ಠ ಪ್ರೇಮ ಕಥಾನಕವಿದೆ. ಮಲೆಯಾಳಂನ  ಗೋಪಿ ಸುಂದರ್ ಸಂಗೀತ ಸಂಯೋಜನೆ  ಚಿತ್ರದ ಹಾಡುಗಳಿಗಿದೆ.ವಿನೋದ್ ಭಾರತಿ ಛಾಯಾಗ್ರಹಣ, ವಿಕ್ರಂ ಮೋರ್, ಜಾಲಿ ಬಾಸ್ಟಿನ್, ವಿನೋದ್ ಅವರ ಸಾಹಸ ಸಂಯೊಜನೆ ಈ ಚಿತ್ರಕ್ಕಿದೆ. ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್ , ನಿಹಾಲ್ ರಾಜ್ ಉಳಿದ ಪಾತ್ರವರ್ಗದಲ್ಲಿದ್ದಾರೆ.