ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

ರಾಮದುರ್ಗ,ನ2: ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಇಂದು ಮುಂಜಾನೆ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ.
ಮುಂಜಾನೆ ಉಪಹಾರದಲ್ಲಿ ಪಲಾವ್ ಸೇವಿಸಿದ ನಂತರ ಸುಮಾರು 50 ವಿದ್ಯಾರ್ಥಿಗಳು ಅಸ್ವಸ್ಥರಾದರೆನ್ನಲಾಗಿದ್ದು, ಈ ಪೈಕಿ ಐವರು ಗಂಭೀರವಾಗಿ ಅಸ್ವಸ್ಥಗೊಂಡಿದ್ದರಿಂದ ಇತರ ವಿದ್ಯಾರ್ಥಿಗಳು ಅವರನ್ನೂ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿದರೆಂದು ತಿಳಿದುಬಂದಿದೆ.