ವಿಷಯ: ಪತ್ರಿಕಾ ಪ್ರಕಟಣೆಗಾಗಿ ಮನವಿ.

ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಕಛೇರಿಯಲ್ಲಿ ರಷ್ಯಾ ಸಮಾಜವಾದಿ ಮಹಾಕ್ರಾಂತಿಯ ೧೦೩ನೇ ವಾರ್ಷಿಕವನ್ನು ಆಚರಿಸಲಾಯಿತು. ನವೆಂಬರ್ ಮಹಾ ಕ್ರಾಂತಿಯ ಆರಂಭದ ದಿನವಾದ ಇಂದು ಪಕ್ಷದ ಕಾರ್ಯದರ್ಶಿಯಾದ ಡಾ.ಚಂದ್ರಗಿರೀಶ್ ಪಕ್ಷದ ಕಛೇರಿ ಧ್ವಜಾರೋಹಣ ಮಾಡಿದರು. ನಂತರ ರಷ್ಯಾ ಕ್ರಾಂತಿಯ ರೂವಾರಿಗಳು, ಮಹಾನ್ ಮಾರ್ಕ್ಸವಾದಿ ಚಿಂತಕರಾದ ವಿ.ಐ.ಲೆನಿನ್ ಮತ್ತು ಜೋಸೆಫ್ ಸ್ಟಾಲಿನ್ ಅವರ ಭಾವ ಚಿತ್ರಕ್ಕೆ ಮಾರ್ಲಪಣೆ ಮಾಡಿದರು. ಈ ಸಂದರ್ಭದಲ್ಲಿ ರಷ್ಯಾ ಮಹಾನ್ ಸಮಾಜವಾದಿ ಕ್ರಾಂತಿ ಚಿರಾಯುವಾಗಲಿ, ನವೆಂಬರ್ ಮಹಾಕ್ರಾಂತಿ ಚಿರಾಯುವಾಲಿ, ಕಾರ್ಮಿಕ ವರ್ಗದ ಅಂತರರಾಷ್ಟ್ರೀಯತೆ ಚಿರಾಯುವಾಗಲಿ, ಮಹಾನ್ ಮಾರ್ಕ್ಸವಾದಿ ಚಿಂತಕರಾದ ವಿ.ಐ.ಲೆನಿನ್ ಮತ್ತು ಜೋಸೆಫ್ ಸ್ಟಾಲಿನ್ ಅವರಿಗೆ ಲಾಲ್ ಸಲಾಂ ಮುಂತಾದ ಘೋಷಣೆಗಳನ್ನು ಹಾಕಲಾಯಿತು.
ಡಾ.ಚಂದ್ರಗಿರೀಶ್ ಅವರು ಮಾತನಾಡಿ, ಮಾನವನಿಂದ ಮಾನವನ ಶೋಷಣೆಗೆ ಕೊನೆಹಾಡಿದ ರಷ್ಯಾ ಕ್ರಾಂತಿಯು ಕಾರ್ಮಿಕ ವರ್ಗದ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ. ಅತ್ಯಂತ ಹಿಂದುಳಿದ ದೇಶದಲ್ಲಿ ಕ್ರಾಂತಿಯನ್ನು ನೆರವೇರಿಸಿದ ಲೆನಿನ್ ಚಿಂತನೆಗಳು ನಮಗೆಲ್ಲ ಸ್ಪೂರ್ತಿಯಾಗಿವೆ. ಮಾರ್ಕ್ಸವಾದ-ಲೆನಿನ್‌ವಾದ ಬರೀ ತತ್ವಶಾಸ್ತ್ರಗಳಲ್ಲ, ಜಾರಿಗೆ ತರಲು ಸಾಧ್ಯ ಎನ್ನುವುದು ಸಾಭೀತಾಗಿದೆ. ನಮ್ಮ ದೇಶದಲ್ಲಿರುವ ಶೋಷಕ ಬಂಡವಾಳಶಾಹಿ ವ್ಯವಸ್ಧೆಯ ವಿರುದ್ಧ ಹೋರಾಡಲು ನವೆಂಬರ್ ಕ್ರಾಂತಿ ದಾರಿದೀಪವಾಗಿದೆ ಎಂದರು.
ರಾಯಚೂರು ಜಿಲ್ಲಾ ಸಂಘಟನಾ ಸಮಿತಿಯ ಸದ್ಯಸರಾದ ಎನ್ ಎಸ್ ವೀರೆಶ್, ಚನ್ನಬಸವ ಜಾನೇಕಲ್, ಮಹೇಶ ಚೀಕಲಪರ್ವಿ, ಸದ್ಯಸರಾದ ಅಣ್ಣಪ್ಪ, ಮಲ್ಲಣಗೌಡ, ಪೀರ್‌ಸಾಬ್, ಮೌನೇಶ್, ಕಾರ್ತಿಕ್,ಬಸವರಾಜ, ಹೇಮಂತ ಅಮೊಘ ಮುಂತಾದವರು ಇದ್ದರು.