ವಿಷಯುಕ್ತ ಆಹಾರ ಸೇವನೆ; ೧೫ ಕುರಿಗಳ ಸಾವು

ಜಗಳೂರು.; ಅರಣ್ಯದಲ್ಲಿ ವಿಷಯುಕ್ತ ಆಹಾರ ಸೇವನೆಯಿಂದ 15ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಜಗಳೂರು ಗೊಲ್ಲರಹಟ್ಟಿಯಲ್ಲಿ  ನಡೆದಿದೆ. ಜಗಳೂರು ಗೊಲ್ಲರಹಟ್ಟಿಯ ಗೋಪಾಲಪ್ಪ, ಕಾಟಪ್ಪ, ರತ್ನಮ್ಮ ಎಂಬುವರಿಗೆ ಸೇರಿದ ಕುರಿಗಳಾಗಿವೆ, ಎಂದಿನಂತೆ ತಮ್ಮ ಕುರಿಗಳನ್ನು ಮೇಯಿಸಲು ಅಡವಿಗೆ ಹೋಗಿದ್ದರು. ಆದರೆ ಮೇವಿನ ಜತೆಗೆ ವಿಷಯುಕ್ತ ಆಹಾರ ಸೇವಿಸಿದ ಕೇವಲ ಹದಿನೈದು ನಿಮಿಷಗಳಲ್ಲಿ ಒಂದೊಂದೆ ಮೃತಪಟ್ಟಿವೆ, ಈ ಘಟನೆಯಿಂದ ಕುರಿಗಾಯಿಗಳು ಗಾಬರಿಗೊಂಡಿದ್ದಾರೆ.ತಕ್ಷಣವೇ ಪಶು ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ  ಸ್ಥಳಕ್ಕೆ ಭೇಟಿ ನೀಡಿ ವೈದ್ಯಾಧಿಕಾರಿ ಡಾ. ಮಹಾದೇವಪ್ಪ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಘಟನೆಯಿಂದ 2 ಲಕ್ಷಕ್ಕೂ ಅಧಿಕ ಹಾನಿಯುಂಟಾಗಿದೆ ಎಂದು ಕುರಿಗಾಯಿಗಳು ಅಳಲು ತೋಡಿಕೊಂಡರು.