ವಿಷಪೂರಿತ ಮದ್ಯ ಸೇವಿಸಿ ಐವರು ಸಾವು

ನಳಂದ,ಜ.೧೫- ವಿಷಯುಕ್ತ ಮದ್ಯ ಸೇವನೆ ಮಾಡಿದ ಪರಿಣಾಮ ಐದು ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ನಳಂದಾ ಜಿಲ್ಲೆಯಲ್ಲಿ ನಡೆದಿದೆ.
ಹಲವು ಮಖದಿ ತೀವ್ರ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿ ಅಸ್ವಸ್ಥರಾಗಿರುವ ಪೈಕಿ ಕೂಲಿ ಕಾರ್ಮಿಕರ ಹೆಚ್ಚಾಗಿದ್ದಾರೆ. ಅಸ್ವಸ್ಥರಾಗಿರುವವರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ . ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಎಂದು ತಿಳಿಸಿದ್ದಾರೆ. ನಕಲಿ ಮದ್ಯ ಎಲ್ಲಿಂದ ಬಂತು ಯಾರು ತಯಾರಿಸಿದರು ಎನ್ನುವುದು ಸೇರಿದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಮದ್ಯ ಸೇವಿಸಿದ್ದೇ ಸಾವಿಗೆ ಕಾರಣ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಬಿಹಾರದ ವಿವಿಧ ಭಾಗಗಳಲ್ಲಿ ನಕಲಿ ಮದ್ಯಸೇವನೆ ಪ್ರಕರಣ ಹೆಚ್ಚಾಗುತ್ತಿದೆ ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿವೆ