ಹುಮನಾಬಾದ್ :ಜು.11:ಪಟ್ಟಣದ ಕೈಗಾರಿಕಾ ಪ್ರದೇಶದಿಂದ ಹಳ್ಳಗಳಿಗೆ ಹರಿಯಲು ಬಿಡುತ್ತಿರುವ ವಿಷಪೂರಿತ ರಾಸಾಯನಿಕ ತ್ಯಜ್ಯ ತಿಂಗಳೊಳಗೆ ತಡೆಯದಿದ್ದರೇ ಗ ಆಗಸ್ಟ್ 10ರಂದು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಭಾರತೀಯ ಸಾಮಾಜಿಕ” ಕಾರ್ಯಕರ್ತರ ಪೆÇೀರಂ ತಾಲ್ಲೂಕು ಘಟಕ ಅಧ್ಯಕ್ಷ ಸೈಯದ್ ಯಾಸೀನಲಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು. ಕಾರ್ಖಾನೆ ವಿಷಪೂರಿತ ತ್ಯಾಜ್ಯ ಹಳ್ಳಗಳಿಗೆ ಹರಿಬಿಡುವುದನ್ನು ನಿಯಂತ್ರಿಸುವಲ್ಲಿ ವಿವಿಧ ಹಂತದ ಚುನಾಯಿತ ಸಂಪೂರ್ಣ ಪ್ರತಿನಿಧಿಗಳು ವಿಫಲರಾಗಿದ್ದಾರೆ
ಎಂದು ಆರೋಪಿಸಿ , ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಸೋಮವಾರ ಹಮ್ಮಿಕೊಂಡ ಪ್ರತಿಭಟನೆ ವೇಳೆ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸುವ ವೇಳೆ ಮಾತನಾಡಿ ಕಾರ್ಖಾನೆ ವಿಷಪೂರಿತ ತ್ಯಾಜ್ಯ ಹಳ್ಳಗಳಿಗೆ ಬಿಡುವ ವಿಷಯದಲ್ಲಿ ಈ ಹಿಂದಿನ ತಾಲ್ಲೂಕು ದಂಡಾಧಿಕಾ- ರಿಗಳಿಂದ ಹಿಡಿದು ಪ್ರತ್ಯಕ್ಷ, ಪರೋಕ್ಷ ಸಂಬಂಧವಿರುವ ಬಹುತೇಕ ಇಲಾಖೆ ಎಲ್ಲ ಅಧಿಕಾರಿಗಳು ಮಾತ್ರವಲ್ಲದೇ ಸಮಾಜ ತಿದ್ದಬೇಕಾದವರು ಅಕ್ರಮ ಧಂದೆ ಜತೆಗೆ ಕೈಜೋಡಿಸಿದ್ದಾರೆ ಎಂದು ಆರೋಪ ಮಾಡಿದರು.
ಬೀದರ್ ಯುವಶಕ್ತಿ ಸಂಸ್ಥೆ ಜಿಲ್ಲಾಧ್ಯಕ್ಷ ಎಂ.ಜಿ.ಪ್ರಶಾಂತ, ಪ್ರಮುಖರಾದ ಸೈಯದ್ ಯಾಸೀನ್, ಪ್ರಶಾಂತ ವಳಖಿಂಡಿ, ಕರಬಸಪ್ಪ ಹುಡಗಿ, ಹುಮನಾಬಾದ್ ಪಟ್ಟಣ ಸೇರಿ ಮಾಣಿಕ ನಗರ ಹಾಗೂ ಗಡವಂತಿ ಗ್ರಾಮದ ಮುಖಂಡರು ಇದ್ದರು