ವಿಷಪೂರಿತ ತೊಪ್ಪಲು ತಿಂದು,3 ಕುರಿಗಳು ಸಾವು,ಚಿಕಿತ್ಸೆಯಿಂದ13ಕುರಿಗಳು ಸ್ವಲ್ಪ ಚೇತರಿಕೆ.

ಸಂಜೆವಾಣಿ ವಾರ್ತೆಕೂಡ್ಲಿಗಿ. ಆ 20 :- ಮೇಯಲು ಹೋದ ಕುರಿಗಳ ಹಿಂಡಿನಲ್ಲಿ ವಿಷಪೂರಿತ ತೊಪ್ಪಲು ತಿಂದು ಮೂರು ಕುರಿಗಳು ಸಾವನ್ನಪ್ಪಿದ್ದು ಉಳಿದ 13ಕುರಿಗಳು ಪಶುವೈದ್ಯರ ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಘಟನೆ ತಾಲೂಕಿನ ಕಾನಾಮಡುಗು ಗೊಲ್ಲರಹಟ್ಟಿ ಹೊರವಲಯದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ.ಕಾನಾಮಡುಗು ಗೊಲ್ಲರಹಟ್ಟಿಯ ನಾಗೇಂದ್ರಪ್ಪ ಎಂಬುವವರಿಗೆ ಸೇರಿದ 15ಕ್ಕೂ ಹೆಚ್ಚು ಕುರಿಗಳ ಹಿಂಡನ್ನು ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಮಧ್ಯಾಹ್ನ ಮೇಯಿಸಿಕೊಂಡು ಬರುತ್ತಿರುವಾಗ್ಗೆ ಕುರಿಗಳ ಹೊಟ್ಟೆ ಉಬ್ಬರದಿಂದ ಒದ್ದಾಡುತ್ತಿದ್ದಾಗ ತಕ್ಷಣ ಆಲೂರು ಪಶುವೈದ್ಯರಿಗೆ ವಿಷಯ ತಿಳಿಸಲಾಗಿದೆ ತಕ್ಷಣ ಧಾವಿಸಿದ ಡಾ. ವರ್ಷಎಂ.ಪಿ. ಸೀರಿಯಸ್ ಇರುವ  ಕುರಿಗಳಿಗೆ  ಚಿಕಿತ್ಸೆ ನೀಡಲಾಯಿತಾದರು ಆದರಲ್ಲಿ ಮೂರು ಕುರಿಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಉಳಿದ 13ಕುರಿಗಳು ಎರಡು ದಿನದಿಂದ  ಕೊಟ್ಟ ಚಿಕಿತ್ಸೆಯಿಂದ ಸ್ವಲ್ಪ  ಚೇತರಿಸಿಕೊಳ್ಳುತ್ತಿವೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ವೈದ್ಯರ ಸಹಾಯಕರಾಗಿ ಕೆಂಚಮಲ್ಲನಹಳ್ಳಿ ಮಲ್ಲೇಶ ಜೊತೆಯಲ್ಲಿದ್ದರು.