ವಿಶ್ವ ಹ್ಯಾಪಿನೆಸ್ ೨೦೨೧ ಭಾರತಕ್ಕೆ ೧೩೯ ನೇ ಸ್ಥಾನ


ನವದೆಹಲಿ, ಮಾ.೨೦- ವಿಶ್ವಸಂಸ್ಥೆ ವಿಶ್ವ ಹ್ಯಾಪಿನೆಸ್ ವರದಿ ೨೦೨೧ ಬಿಡುಗಡೆ ಮಾಡಿದ್ದು ಅದರಲ್ಲಿ ಭಾರತಕ್ಕೆ ೧೩೯ನೇ ಸ್ಥಾನ ಸಿಕ್ಕಿದೆ.
೧೪೯ ರಾಷ್ಟ್ರಗಳ ಪೈಕಿ ಭಾರತಕ್ಕೆ ೧೩೯ ನೇ ಸ್ಥಾನ ಲಭಿಸಿದೆ ಈ ಪಟ್ಟಿಯಲ್ಲಿ ಫಿನ್ಲ್ಯಾಂಡ್ ಅಗ್ರಸ್ಥಾನದಲ್ಲಿದೆ.
ಸುಸ್ಥಿರ ಅಭಿವೃದ್ಧಿ ಸಮರ್ಪಕ ನಿರ್ವಹಣೆ ಸೇರಿದಂತೆ ವಿಶ್ವದ ವಿವಿಧ ದೇಶಗಳ ಜನರ ಸಂತೋಷ ಸೇರಿದಂತೆ ವಿವಿಧ ಮಾನದಂಡಗಳನ್ನು ಆಧರಿಸಿ ವಿಶ್ವಸಂಸ್ಥೆ ಈ ವರದಿಯನ್ನು ಬಿಡುಗಡೆ ಮಾಡಿದೆ.
ಜನರಿಗೆ ಸಮಾನವಾಗಿ ಬಾಳುವ ಅವಕಾಶ ಅವರ ಜೀವನಮಟ್ಟ ಜೊತೆಗೆ ಅವರು ಎಷ್ಟು ಸಂತೋಷದಿಂದ ಇದ್ದಾರೆ ಎನ್ನುವ ಎಲ್ಲ ಸಂಗತಿಗಳನ್ನು ಕಲೆಹಾಕಿ ಅದರ ಆಧಾರದ ಮೇಲೆ ವರದಿಯನ್ನು ಬಿಡುಗಡೆ ಮಾಡಿದೆ.
೨೦೧೯ ರಲ್ಲಿ ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ ಭಾರತ ೧೪೦ ನೇ ಸ್ಥಾನದಲ್ಲಿತ್ತು ಇದೀಗ ಒಂದು ಸ್ಥಾನ ಮೇಲೇರಿದೆ.ವರದಿಯನ್ನು ಬಿಡುಗಡೆ ಮಾಡುವ ಮುನ್ನ ಭಾರತದಲ್ಲಿ ಹಲವು ಜನರನ್ನು ವೈಯಕ್ತಿಕವಾಗಿ ಮತ್ತು ದೂರವಾಣಿ ಮೂಲಕ ಸಂಪರ್ಕ ಮಾಡಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಾಹಿತಿಗಳು ತಿಳಿಸಿವೆ.ವಿಶ್ವ ಹ್ಯಾಪಿನೆಸ್ ದೇಶಗಳ ಪೈಕಿ ಫಿನ್ಲ್ಯಾಂಡ್ ಅಗ್ರಸ್ಥಾನದಲ್ಲಿದೆ ಇನ್ನುಳಿದಂತೆ ಡೆನ್ಮಾರ್ಕ್ ,ನೆದರ್ ಲ್ಯಾಂಡ್, ಸ್ವೀಡೆನ್, ಜರ್ಮನಿ ನಾರ್ವೆ ನಂತರದ ಸ್ಥಾನದಲ್ಲಿವೆ
ಈ ಪಟ್ಟಿಯಲ್ಲಿ ಬಾಂಗ್ಲಾದೇಶ ೧೦೧, ಪಾಕಿಸ್ತಾನ ೧೦೫, ಚೀನಾ ೮೪, ರವಾಂಡಾ ೧೪೭, ಜಿಂಬಾಂಬೆ ೧೪೮ನೇ ಸ್ಥಾನದಲ್ಲಿದೆ.