ವಿಶ್ವ ಹಿರಿಯ ನಾಗರಿಕರ ದಿನ:100 ವಷ೯ಪೂರೈಸಿದ ಶತಾಯುಷಿ ಮತದಾನರಿಗೆ ಸನ್ಮಾನ..

ಮುದಗಲ್ಲ : ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ, ಚುನಾವಣೆ ಆಯೋಗದ ವತಿಯಿಂದ ಲಿಂಗಸೂರು ತಾಲೂಕಿನ ಮುದಗಲ್ಲ ನಲ್ಲಿ 100ವರ್ಷ ಪೂರೈಸಿದ ಶತಾಯುಷಿ ಮತದಾರರನ್ನು
ಸನ್ಮಾನಿಸಲಾಯಿತು.

ನಿಂಗಪ್ಪ ತಂದೆ ಮಾನಪ್ಪ ಡುಮಕಿ(101) ಜೈಹಿರಾ ಬೇಗಂ (102) ಮುದಗಲ್ಲ ಐದು ಹಿರಿಯ ನಾಗರಿಕರಿಗೆ ಸನ್ಮಾನಿ ಸಲಾಯಿತು.

ರಾಜ್ಯ ಚುನಾವಣಾ ಆಯೋಗದ ನಿರ್ದೇಶನ ದಂತೆ ತಾಲೂಕಾ ಆಡಳಿತ ಲಿಂಗಸುಗೂರು ತಹಸೀಲ್ದಾರ್ ಇವರ ನೇತೃತ್ವದಲ್ಲಿ ಮುದಗಲ್ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ನೂರು ವರ್ಷಗಳ (ಶತಾಯುಷಿ) ಪೊರೈಸಿದ ಪಟ್ಟಣದ ಕಿಲ್ಲಾ ಹಾಗೂ ಮೇಗಳಪೇಟೆಯ ಹಿರಿಯ ನಾಗರೀಕರಿಗೆ ಗೌರವಪೂರ್ವಕ ಸನ್ಮಾನಿಸಿ ಪ್ರಮಾಣ ಪತ್ರ ವಿತರಣಾ ಮಾಡಿದರು

ಈ ಸಂದರ್ಭದಲ್ಲಿ ತಹಶೀಲ್ದಾರ್ ಶಂಷಾಲಂ ಹಾಗೂ ಉಪತಹಸೀಲ್ದಾರ್ ತುಳಜಾರಾಂ ಸಿಂಗ್, ಮುದಗಲ್ ಮಂಡಲ ಅಧ್ಯಕ್ಷರಾದ ಸಣ್ಣಸಿದ್ದಯ್ಯ ಸ್ವಾಮಿ , ಶಾಸಕರ ಆಪ್ತ ಸಹಾಯಕರಾದ ಫಕೀರಪ್ಪ ಕುರಿ , ಅಯ್ಯಪ್ಪಸ್ವಾಮಿ,ಪಿಡ್ಡಪ್ಪ ಹೊಳೆಯಾಚಿ,ಮಲ್ಲಪ್ಪ ಮಾಟೂರು,ರಾಯಪ್ಪ ಹೊಳೆಯಾಚಿ,ಶಿವಯ್ಯ ತಾತ, ಚೆನ್ನಬಸಪ್ಪ ಕಿಡದೂರು,ಮಾನಪ್ಪ ಡುಮಕಿ , ಅಯ್ಯಣ್ಣ,ನೀಲಪ್ಪ ಸೇರಿದಂತೆ ಗ್ರಾಮಸ್ಥರು ಹಾಗೂ ನಾಡಕಛೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.