ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಶ್ರೀ ರಾಮ ನವಮಿ ಆಚರಣೆ

ಕೊಲ್ಹಾರ:ಏ.18: ಸರ್ವಹಿತಚಿಂತಕನಾಗಿ ಬದುಕಿದ ಶ್ರೀರಾಮನನ್ನು ಪೂಜಿಸದೆ ಮತ್ತೇ ಯಾರನ್ನು ಪೂಜಿಸಬೇಕು. ರಾಮನಾಮದಿಂದ ಶಾಂತಿ, ನೆಮ್ಮದಿ ದೊರೆಯುತ್ತದೆ. ಅಂತಹ ಶ್ರೀರಾಮನ ದೇವಾಲಯ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವುದು ಭಾರತದ ಹೆಮ್ಮೆಯ ಪ್ರತೀಕವಾಗಿದೆ ಎಂದು ವಿಜಯ ಕರಣೆ ಹೇಳಿದರು

ಪಟ್ಟಣದ ಶ್ರೀ ದ್ಯಾಮವ್ವದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಬುಧವಾರ ನಡೆದ ಶ್ರೀ ರಾಮ ನವಮಿ ಆಚರಣೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಂತರ ಮಾತನಾಡಿದ ಅವರು
ವಿಷ್ಣುವಿನ 7ನೇ ಅವತಾರ ಶ್ರೀರಾಮಾವತಾರದಲ್ಲಿ
ಮನುಷ್ಯ ಹೇಗೆ ಸದ್ಗುಣಿಯಾಗಿರಬೇಕು ಎಂಬುದನ್ನು ಶ್ರೀರಾಮ ಸ್ವತಃ ನಡೆದು ತೋರಿಸಿದ್ದಾನೆ. ತಂದೆ-ತಾಯಿಗಳ ಮಾತುಗಳನ್ನು ಹೇಗೆ ಕೇಳಬೇಕು, ಅವುಗಳನ್ನು ಹೇಗೆ ಪಾಲಿಸಬೇಕು ಎಂಬುದಕ್ಕೆ ಶ್ರೀರಾಮ ಸಾಕ್ಷಾತ್ ಉದಾಹರಣೆಯಾಗಿದ್ದಾನೆ. ಅವನ ಜೀವನ
ಚರಿತ್ರೆಯನ್ನು ಓದಿ ಅದರಲ್ಲಿನ ಕೆಲವಷ್ಟು ಗುಣಗಳನ್ನಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದ ಅವರು, ನಮ್ಮ ಸಂಸ್ಕøತಿಯ ಕಣ್ಣುಗಳಾಗಿರುವ ರಾಮಾಯಣ ಮತ್ತು ಮಹಾಭಾರತವನ್ನು ಮಕ್ಕಳಿಂದ ಓದಿಸುವ, ಓದಲು ಪ್ರೇರಣೆ ನೀಡುವ ಕಾರ್ಯಗಳಾಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಗುರು ಗಣಕುಮಾರ, ಶಿವು ಗಿಡಪ್ಪಗೋಳ,ಉಮೇಶ ಗಣಿ, ಅಭೀಜಿತ್ ಬಾರಸ್ಕರ, ವಿನೋದ ಕರಣೆ ಮಲ್ಲು ಹೂಗಾರ, ಶರಣು ತೆಗ್ಗಿ, ರಾಜು ಮಠಪತಿ ,ಸಂಗು ತುಂಬರಮಟ್ಟಿ ಸಹಿತ ಅನೇಕರು ಉಪಸ್ಥಿತರಿದ್ದರು.