ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು

ಸಂಜೆವಾಣಿ ವಾರ್ತೆ
ಮಂಡ್ಯ ಜೂ05: ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಹಿಂದೂ ನಾಯಕ ಶರಣ್ ಪಂಪುವೆಲ್ ಅವರನ್ನು ಗುರಿಯಾಗಿಸಿ ದಾಖಲಿಸಿರುವ ಪ್ರಕರಣ ವಾಪಸ್ಸು ಪಡೆಯಬೇಕು. ಮಂಗಳೂರಿನ ಕಂಕನಾಡಿ ಬಳಿ ಅನುಮತಿ ರಹಿತ ನಮಾಜು ಮಾಡಿದ ಪ್ರಕರಣಕ್ಕೆ ಬಿ ರಿಪೆÇೀರ್ಟ್ ರದ್ದುಪಡಿಸುವುದು, ಈ ಪ್ರಕರಣದಲ್ಲಿ ಅಮಾನತ್ತಾಗಿರುವ ಪೆÇಲೀಸ್ ಅಧಿಕಾರಿ ಅಮಾನತ್ತು ವಾಪಸ್ಸು ಪಡೆಯುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮಂಗಳೂರಿನ ಕಂಕನಾಡಿ ಬಳಿಯ ಮಸೀದಿ ಎದುರು ರಸ್ತೆಯಲ್ಲಿ ಕೆಲವರು ಅನುಮತಿ ರಹಿತವಾಗಿ ನಮಾಜ್ ಮಾಡಿದ್ದರು. ಪೆÇಲೀಸರು ಇದನ್ನು ಗಮನಿಸಿ ಸುಮೋಟೋ ಪ್ರಕರಣ ದಾಖಲಿಸಿದ್ದರು. ಆದರೆ ಮಾಧ್ಯಮದಲ್ಲಿ ಪ್ರಕಟವಾದಂತೆ ಕಾಂಗ್ರೆಸ್ ಪಕ್ಷ ಹಾಗೂ ಮುಸ್ಲೀಂ ಸಂಘಟನೆಯ ಒತ್ತಡ ಮೇರೆಗೆ ಆ ಪ್ರಕರಣವನ್ನು ಬಿ ರಿಪೆÇೀರ್ಟ್ ಹಾಕಿ ಪೆÇಲೀಸರು ಹಿಂದೆ ಪಡೆದಿರುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇರುವ ಸ್ಥಳೀಯ ಪೆÇಲೀಸರು ನ್ಯಾಯಯುತವಾಗಿ ದಾಖಲಿಸಿದ್ದ ಪ್ರಕರಣ ಮತ್ತು ಆ ಪೆÇಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಿರುತ್ತಾರೆ ಎಂದು ಆರೋಪಿಸಿದರು.
ಜೆರೋಸಾ ಶಾಲೆಯ ಎದುರು ಅನುಮತಿ ಇಲ್ಲದೆ ಜೈಶ್ರೀರಾಮ್ ಹೇಳಿದ್ದಕ್ಕೆ ಕೆಲವು ತಿಂಗಳ ಹಿಂದೆ ಪ್ರಕರಣ ದಾಖಲಿಸುವುದು ಹಾಗೂ ಅನುಮತಿ ರಹಿತ ನಮಾಜ್ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದರೂ ಒತ್ತಡದ ಮೇರೆಗೆ ಯಾವುದೇ ತನಿಖೆ ನಡೆಸದೆ ಕಾಂಗ್ರೆಸ್ ಮತ್ತು ಮುಸ್ಲೀಂ ಸಂಘಟನೆಗಳು ಹೇಳಿದ ತಕ್ಷಣ ಬಿ ರಿಪೆÇೀರ್ಟ್ ಹಾಕಿ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಯನ್ನು ಅಮಾನತ್ತುಗೊಳಿಸುವ ಮೂಲಕ ಕಾನೂನು ಉಲ್ಲಂಘಿಸಿರುವವರಿಗೆ ತಡೆಯುವ ಪೆÇಲೀಸರ ಧೈರ್ಯವನ್ನು ಅಲುಗಿಸಿ ತಾರತಮ್ಯ ಮತ್ತು ದ್ವೇಷ ರಾಜಕಾರಣ ಮಾಡುತ್ತಾರೆ ಎಂದು ದೂರಿದರು.
ಅನುಮತಿ ಇಲ್ಲದೆ ನಮಾಜು ಮಾಡಿದವರಿಗೆ ಸೂಕ್ತ ಶಿಕ್ಷೆ ನೀಡಬೇಕು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಪೆÇಲೀಸ್ ಅಧಿಕಾರಿಯನ್ನು ಅಮಾನತ್ತು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
ಭಜರಂಗದಳ ಜಿಲ್ಲಾ ಸಂಯೋಜಕ ಪುನೀತ್, ಧರ್ಮರಕ್ಷಾ ಪ್ರಮುಖ್ ಕೇಶವ್, ಮಂಡ್ಯ ಗ್ರಾಮಾಂತರ ಕಾರ್ಯದರ್ಶಿ ಚಿನ್ಮಯ್, ರವಿ, ಸಂತೋಷ್ ಇತರರಿದ್ದರು.