ವಿಶ್ವ ಹಾಲು ದಿನಾಚರಣೆಹಾಲಿನ ಉತ್ಪನ್ನಗಳ ಜಾಗೃತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.01:  ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆವರಣದಲ್ಲಿರುವ ಶಾಲೆಗಳಲ್ಲಿ ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ, ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಿನ್ನೆ ಹಮ್ಮಿಕೊಳ್ಳಲಾಗಿತ್ತು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಟಿ,ತಿರುಪತಪ್ಪ ಮಾತನಾಡಿ,  ವಿಶ್ವ ಹಾಲು ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 1 ರಂದು ಆಚರಿಸಲಾಗುತ್ತದೆ.  2001 ರಲ್ಲಿ ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಪ್ರಾರಂಭಿಸಲಾಯಿತು. ಡೇರಿ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ರೀತಿಯಲ್ಲಿ ಸಾಧ್ಯವಿರುವ ಉಪಕ್ರಮಗಳ ಬಗ್ಗೆ ಅರಿವು ಮೂಡಿಸಲು ಮತ್ತು ಬೆಂಬಲಿಸಲು ಅವಕಾಶವನ್ನು ಒದಗಿಸಲು ಈ ದಿನಾಚರಣೆ ಉಪಯುಕ್ತವಾಗಿದೆಂದರು.
ಮಾನವನ ಜೀವನದಲ್ಲಿ ಹಾಲಿನ ಅಗತ್ಯ ಮತ್ತು ಪ್ರಮುಖ್ಯತ ಬಗ್ಗೆ ಮಾಹಿತಿ ನೀಡುವುದು ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವುದು. ಇದರ ಜೊತೆಯಲ್ಲಿ ಹಾಲಿನಲ್ಲಿರುವ ಕ್ಯಾಲಿಯಂ, ಪ್ರೋಟಿನ್, ವಿಟಮಿನ್ ಬಿ2 ಮುಂತಾದ ಪೋಷಂಕಾಶಗಳ ಬಗ್ಗೆ ತಿಳಿಸುವುದು ದಿನಾಚರಣೆಯ ಮಹತ್ವದ ಅಂಶವಾಗಿದೆಂದರು.
ಒಕ್ಕೂಟದ ಪ್ರಧಾನ ವ್ಯವಸ್ಥಾಪಕರು(ಡೇರಿ),  ಜೆ.ಬಿ. ಉದಯಕುಮಾರ್, ವ್ಯವಸ್ಥಾಪಕರು(ಶೇಖರಣೆ). ಲಕ್ಕಣ್ಣನವರು,  ಮಾರುಕಟ್ಟೆ ಸಿ.ಎನ್.ಮಂಜುನಾಥ, ಬಾಬು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀಕ್ಷಿ ನಂದಿನಿ ಹಾಗೂ ನಾಗಮಣಿ ರವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ  ಒಕ್ಕೂಟದ ಮಾರುಕಟ್ಟೆ ವಿಭಾಗದಉಪ ವ್ಯವಸ್ಥಾಪಕ ಎಸ್. ವೆಂಕಟೇಶ್ ಗೌಡ ಪ್ರಾಸ್ತವಿಕವಾಗಿ ಮಾತನಾಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಲೀಲಾವತಿ ಸ್ವಾಗತ. ನೀರಜ ಅವರು
ವಂದನಾರ್ಪಣೆ ಮಾಡಿದರು.
ಉಪಸ್ಥಿತರಿದ್ದ ಗಣ್ಯರಿಗೆ,  ವಿದ್ಯಾರ್ಥಿಗಳಿಗೆ ನಂದಿನಿ ಗುಡ್ ಲೈಫ್ ಪೆಟ್ ಬಾಟಲ್‌ಗಳನ್ನು ವಿತರಿಸಲಾಯ್ತು.