ವಿಶ್ವ ಸ್ಕೌಟ್ ಸ್ಕಾರ್ಫ್ ದಿನಾಚರಣೆ 

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೧; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆ ವತಿಯಿಂದ ವಿಶ್ವ ಸ್ಕೌಟ್  ಸ್ಕಾರ್ಫ್ ಮತ್ತು ಸೂರ್ಯೋದಯ ದಿನಾಚರಣೆಯನ್ನು ಪ್ರತಿಜ್ಞೆಯ ಮರು ಉಚ್ಚಾರಣೆ ಮಾಡುವ ಮೂಲಕ  ಆಚರಿಸಲಾಯಿತು .ಈ ವೇಳೆ ಜಿಲ್ಲಾ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಜೆ ಚಿಗಟೇರಿ ಮಾತನಾಡಿ ಸಂಸ್ಥಾಪಕರಾದ ಲಾರ್ಡ್ ಬೇಡನ್ ಪವೆಲ್ ಅವರು 1907 ನೇ  ಇಸವಿಯಲ್ಲಿ ಆಗಸ್ಟ್ 1 ನೇ ತಾರೀಕು ಇಂಗ್ಲೆಂಡಿನ ಬ್ರೌನ್ ಸೀ ಐಲ್ಯಾಂಡ್ ನಲ್ಲಿ ಪ್ರಯೋಗಿಕವಾಗಿ  ಶಿಬಿರವನ್ನು ನಡೆಸಿ ಅಂದಿನಿಂದ ವಿದ್ಯಾರ್ಥಿಗಳು ಸ್ಕೌಟ್ ಸಂಸ್ಥೆಯ ಜ್ಞಾಪಕಾರ್ಥಕವಾಗಿ .ಶಾಲಾ ಅವಧಿಯಲ್ಲಿ ಸ್ಕೌಟ್ ಮತ್ತು ಗೈಡ್ನಲ್ಲಿ ಮತ್ತು ಕಾಲೇಜಿನಲ್ಲಿ   ರೋವರ್ಸ್ ,ರೆಂಜರ್ಸ್ ಆಗಿ ಸೇವೆ ಸಲ್ಲಿಸಿದಂತಹವರು. ತಮ್ಮ ವೃತ್ತಿ  ಜೀವನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ನೆನಪನ್ನು ಮಾಡಿಕೊಳ್ಳಲು ಸ್ಕಾರ್ಫ್  ಧರಿಸಿ ವೃತ್ತಿಯಲ್ಲಿ ನಿರತರಾಗಿರುವುದು ಎಂದು   ಸ್ಕಾರ್ಫ್ ದಿನದ ಮಹತ್ವವನ್ನು ತಿಳಿಸಿದರು.  ಹಾಗೂ  ಈ ಸಂಸ್ಥೆಯಲ್ಲಿ ಸೇರಿದ ಎಲ್ಲಾರು ಸಹ ಸ್ಕಾರ್ಫ್ ಅನ್ನು ಧರಿಸಿ ಸೇವೆಯನ್ನು ಮಾಡುವರು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಪುಟ್ಟ ಕಬ್ ವಿದ್ಯಾರ್ಥಿ ಚಿರಂಜೀವಿ ಕೆನಡಾ ದೇಶದಿಂದ  ಆಗಮಿಸಿದ್ದು ಈ ಕಾರ್ಯಕ್ರಮಕ್ಕೆ ಇನ್ನಷ್ಟು ರಂಗು ನೀಡಿತು. ಈ ಸಂದರ್ಭದಲ್ಲಿ   ಜಿಲ್ಲಾ ಸ್ಕೌಟ್ ಆಯುಕ್ತರಾದ ಎ.ಪಿ ಷಡಾಕ್ಷರಪ್ಪ,ಜಿಲ್ಲಾ ಕಾರ್ಯದರ್ಶಿಶ್ರೀಮತಿ ರತ್ನ , ಜಿಲ್ಲಾ ಸ್ಥಾನಿಕಾ ಆಯುಕ್ತರಾದ ಎನ್. ಕೆ. ಕೊಟ್ರೇಶ್, ಮತ್ತು ಕಿರಣ್  , ಶ್ರೀಮತಿ ಸುಖವಾನೀ ಜಿಲ್ಲಾ ಜಂಟಿ ಕಾರ್ಯದರ್ಶಿ, ಸುರೇಶ್ ಚೌಹನ್ , ಶ್ರೀಮತಿ ಅಶ್ವಿನಿ ಹಾಗೂ ಯುವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.