ಬೀದರ,ಮೇ 27: ಜಿಲ್ಲಾ ಪಂಚಾಯತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರತಿಕಾಂತ.ವ್ಹಿ.ಸ್ವಾಮಿ ಅದಿಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಪ್ರಪಂಚದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ವಿವಿಧ ರೀತಿಯಾದ ಮಾನಸಿಕಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಕೂಡ ಅಷ್ಟೆಮುಖ್ಯವಾಗಿದೆ. ಆದ್ದರಿಂದ ಮಾನಸಿಕವಾಗಿ ಯಾವುದೇ ರೋಗಲಕ್ಷಣಗಳು ಕಂಡುಬಂದಲ್ಲಿ, ಹೆದರದೆ ಮನೋರೋಗ ವಿಭಾಗಕ್ಕೆ ಬಂದು ಚಿಕಿತ್ಸೆ ಹೊಂದಿ ಗುಣಮುಖರಾಗುವಂತೆ ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಪ್ರಭಾರಿ ಉಪನಿರ್ದೇಶಕ ಸಂಗ್ರಾಮಪ್ಪಾ ಖಂಡಾಳೆ ಆಗಮಿಸಿದರು.
ವಿಶೇಷ ಉಪನ್ಯಾಸಕರಾದ ಮನೋವೈದ್ಯ ಡಾ. ಅಮಲ್ ಶರಿಫ್
ಮಾತನಾಡಿ ಸ್ಕಿಜೋಫ್ರೀನಿಯಾ ಕಾಯಿಲೆಯಿಂದ ಪ್ರಪಂಚದಲ್ಲಿ 100 ರಲ್ಲಿ 15 ರಿಂದ30 ವಯಸ್ಸಿನವರಲ್ಲಿ ಸ್ಕಿಜೋಫ್ರೀನಿಯಾ ಕಾಯಿಲೆಗೆ ಒಳಪಡುತ್ತಿದ್ದಾರೆ.ತೀವ್ರತರಹದ ಮಾನಸಿಕ ಕಾಯಿಲೆಗಳಲ್ಲಿ ಭ್ರಮೆ, ಜಂಭ, ಆತಂಕ, ವಿಪರೀತವರ್ತನೆ ಇವುಗಳು ಸ್ಕಿಜೋಫ್ರೀನಿಯಾ ಕಾಯಿಲೆಯ ಲಕ್ಷಣಗಳಾಗಿವೆ.ವಿದ್ಯಾರ್ಥಿಗಳು ಉತ್ತಮ ಜೀವನ ಕೌಶಲ್ಯಕ್ಕಾಗಿ ಉತ್ತಮ ವರ್ತನೆರೂಢಿಸಿಕೊಳ್ಳುವುದು, ಉತ್ತಮ ಮನಸ್ಸು ಬೆಳೆಸುವುದು, ವಿವಿಧ
ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ವಿದ್ಯಾಭ್ಯಾಸದ ಪುನರ್
ಮನನ, ವಿಧ್ಯಾರ್ಥಿಗಳು ಮುಕ್ತ ಮನಸ್ಸಿನಿಂದ ಪಾಲಕ ಮತ್ತು
ಪೋಷಕರ ಜೊತೆ ಸಂಪರ್ಕದಲ್ಲಿರಲು ಪ್ರಯತ್ನಿಸಬೇಕು ಎಂದು
ಹೇಳಿದರು.ಜಿಲ್ಲಾ ಮಾನಸಿಕ ಆರೋಗ್ಯಕಾರ್ಯಕ್ರಮ ಅಧಿಕಾರಿ ಡಾ. ಕಿರಣ ಎಮ್. ಪಾಟೀಲಅಧ್ಯಕ್ಷತೆ ವಹಿಸಿದ್ದರು. ಹಿರಿಯ
ಆರೋಗ್ಯ ನಿರೀಕ್ಷಣಾಧಿಕಾರಿವೀರಶೆಟ್ಟಿ ಚನ್ನಶೆಟ್ಟಿ ನಿರೂಪಿಸಿದರು,ಮನೋತಜ್ಞ ಡಾ.ಮಲ್ಲಿಕಾರ್ಜುನಗುಡ್ಡೆ ಸ್ವಾಗತಿಸಿದರು.ಆಪ್ತ ಸಮಾಲೋಚಕ
ಶೀಮಪ್ಪಾ.ಬಿ.ಸರಕುರೆ ವಂದಿಸಿದರು.ಕಾರ್ಯಕ್ರಮದಲ್ಲಿ ಸ್ಕಿಜೋಫ್ರೀನಿಯಾ ಕಾಯಿಲೆಯಭಿತ್ತಿಪತ್ರಗಳನ್ನು ಸಾರ್ವಜನಿಕರ ಮಾಹಿತಿಗಾಗಿ
ಬಿಡುಗಡೆಗೊಳಿಸಲಾಯಿತು. ಇದೆ ಸಂದರ್ಭದಲ್ಲಿ, ಡಾ.ಶಿವಶಂಕರ ಬಿ,
ಡಾ.ಶಂಕ್ರರೆಪ್ಪಾ ಬೊಮಾ, ಡಾ.ರಸಿದ್, ಇಮ್ಮಾನುವೇಲ್, ಜ್ಯೋತಿ, ಭ್ರಮಾರಂಭಾದೇವಿ, ರೇಣುಕಾ, ರಮೇಶ,ಗೋರಕನಾಥ, ಅಬ್ದುಲ್ ಹೈ, ಶಾಮರಾವ, ಪ್ರಮೋದ ರಾಥೋಡ,ಸೂರ್ಯಕಾಂತ, ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯವರು,ಜಿಲ್ಲಾ ಶುಶ್ರೂಷಕರ ತರಬೇತಿ ಕೇಂದ್ರದ (ನರ್ಸಿಂಗ ಕಾಲೇಜು)ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದರು.