
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಅ.21: ವಿಶ್ವ ಸೊಳ್ಳೆ ದಿನ. ಸೊಳ್ಳೆಗಳಿಂದ ಎದುರಾಗುವ ಅಪಾಯ ಮತ್ತು ರೋಗಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ಸೊಳ್ಳೆ ದಿನ ಮತ್ತು ಸದ್ಭಾವನಾ ದಿನವನ್ನು ಆಚರಣೆ ಮಾಡಲಾಗುತ್ತದೆ.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಮುಂದೆ ಜಾತಿ, ಧರ್ಮ, ಪ್ರದೇಶ, ಮತ್ತು ಅಥವಾ ಭಾಷೆಯ ಭೇದಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಅಲ್ಲದೇ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ನಮ್ಮಲ್ಲಿರುವ ಎಲ್ಲಾ ಭೇದಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇವೆ ಎಂದು, ವಿಶ್ವ ಸೊಳ್ಳೆಗಳ ನಿಯಂತ್ರಣವನ್ನು ತಡೆಯಲು ಸದ್ಭಾವನಾ ದಿನದ ಪ್ರಯುಕ್ತ ಪ್ರತಿಜ್ಞೆಯನ್ನು ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಡಿದರು.
ಸೊಳ್ಳೆ ಎಂದರೆ ತಕ್ಷಣ ಕೆಲವರಿಗೆ ಕಿರಿಕಿರಿ ಇನ್ನೂ ಕೆಲವರಿಗೆ ಭಯ. ರಾತ್ರಿ, ಹಗಲು ಎನ್ನದೇ ಮಲಗಲು ಬಿಡದೆ ಕಿವಿಯ ಬಳಿ ಗುಯ್ ಗುಡುತ್ತಿದ್ದರೆ ಎಂತವರಿಗೂ ಕೋಪ ನೆತ್ತಿಗೇರುತ್ತದೆ. ಸೊಳ್ಳೆಯನ್ನು ಒಡಿಸಲು ಎಷ್ಟೋ ಹರಸಾಹಸ ಮಾಡಿದರು ಕೆಲವೊಮ್ಮೆ ಅದು ಸಾದ್ಯ ಆಗಲ್ಲ. ಆಗ ಮನುಷ್ಯನನ್ನು ಸಿಟ್ಟಿಗೆರಿಸುವುದಂತು ನಿಜ.
ಸೊಳ್ಳೆಗಳು ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲದೆ ಬಹಳ ಅಪಾಯಕಾರಿ ಕೂಡಾ ಹೌದು. ಸೊಳ್ಳೆಗಳು ಹಲವು ರೋಗಗಳಿಗೆ ಕಾರಣವಾಗಬಹುದು. ಅದರಲ್ಲೂ ದೊಡ್ಡ ದೊಡ್ಡ ರೋಗಗಳಾದ ಮಲೇರಿಯಾ, ಚಿಕನ್‌ಗುನ್ಯಾ, ಡೆಂಗ್ಯೂ, ಝೀಕಾ ವೈರಸ್, ಹಳದಿ ಜ್ವರ ಮುಂತಾದ ರೋಗಗಳು ಬರುವುದು ಸೊಳ್ಳೆಗಳಿಂದ. ಪ್ರತಿ ವರ್ಷ ಸೊಳ್ಳೆಗಳಿಂದ ಹರಡುವ ರೋಗಗಳಿಂದ ಸುಮಾರು ಐದು ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ.
ಇದಕ್ಕಾಗಿಯೇ ಪ್ರತಿ ವರ್ಷ ವಿಶ್ವ ಸೊಳ್ಳೆ ದಿನವನ್ನು ಆಚರಣೆ ಮಾಡಲಾಗುತ್ತದೆ. ಮಾರಣಾಂತಿಕ ಕಾಯಿಲೆಗಳನ್ನು ಹರಡುವ ಮಹಾಮಾರಿ ಸೊಳ್ಳೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ಸೊಳ್ಳೆ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ತಾಲೂಕು ವ್ಯೆದ್ಯಾಧಿಕಾರಿ ಈರಣ್ಣ ತಿಳಿಸಿದರು.
ನಗರ ಆಸ್ಪತ್ರೆಯ ವ್ಯೆದ್ಯಾಧಿಕಾರಿ ಮಹಾಲಕ್ಷ್ಮಿ, ಬಿ.ಎಚ್.ಇ.ಓ ಮಹಮ್ಮದ್ ಖಾಸಿಂ, ತಾಲೂಕು ಹಿರಿಯ ನಿರೀಕ್ಷಣಾಧಿಕಾರಿ ಬೀಮ್ ರೆಡ್ಡಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಸಿಬ್ಬಂದಿಗಳು ಮತ್ತು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.