ವಿಶ್ವ ಸಸ್ಯಾಹಾರಿ ದಿನ

ಆಹಾರದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಮುಖ ಪದ್ಧತಿಗಳಿವೆ. ಜನರು ತಮ್ಮ ಸಮುದಾಯ, ಪ್ರಾದೇಶಿಕತೆ, ಅಭಿರುಚಿ, ಆರೋಗ್ಯ ಕಾಳಜಿ, ಪೌಷ್ಟಿಕಾಂಶ ಇತ್ಯಾದಿಗಳನ್ನು ಪರಿಗಣಿಸಿ ಸಸ್ಯಾಹಾರ ಅಥವಾ ಮಾಂಸಾಹಾರಗಳನ್ನು ರೂಢಿಸಿಕೊಂಡಿದ್ದಾರೆ. ಇದು ಅವರ ಸ್ವಂತ ಆಯ್ಕೆ. ಈ ಎರಡೂ ಆಹಾರ ಪದ್ಧತಿಗಳನ್ನೂ ಒಪ್ಪಿಕೊಂಡಿರುವ ಜನರಿದ್ದಾರೆ. ಕೆಲವರು ಕೇವಲ ಸಸ್ಯಾಹಾರವನ್ನು ಅನುಸರಿಸಿದರೆ, ಇನ್ನು ಕೆಲವರು ಇವೆರಡನ್ನೂ ಅನುಕರಿಸುತ್ತಾರೆ. ಆದರೆ ಈಗ ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಒಳ್ಳೆಯದು ಎಂಬೊಂದು ಕಾಳಜಿ ವ್ಯಕ್ತವಾಗಿದೆ. ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ವಹಿಸುತ್ತಿರುವ ಈಗಿನ ಪೀಳಿಗೆ ಸಸ್ಯಾಹಾರ ಅತ್ಯಂತ ಪ್ರಿಯವಾದ ಆಹಾರ ಪದ್ಧತಿಯಾಗಿ ಹೊರ ಹೊಮ್ಮಿದೆ. ಈ ಪರಿಣಾಮ ಮಾಂಸಾಹಾರಿಗಳು ಕೂಡಾ ಮಾಂಸದ ಖಾದ್ಯಗಳನ್ನು ತ್ಯಜಿಸಿ ಸಂಪೂರ್ಣವಾಗಿ ಸಸ್ಯಾಹಾರದತ್ತ ಮುಖ ಮಾಡುತ್ತಿದ್ದಾರೆ. ಆಹಾರ ಮಾತ್ರವಲ್ಲ, ತಮ್ಮ ಜೀವನಶೈಲಿಯನ್ನೂ ಹಸಿರುಮಯವಾಗಿಸುತ್ತಿದ್ದಾರೆ.

ಸಸ್ಯಾಹಾರಿಗಳಿಗಾಗಿಯೇ ಒಂದು ವಿಶೇಷವಾದ ದಿನವಿದೆ. ಅದುವೇ ನವೆಂಬರ್ 1. ಈ ದಿನವನ್ನು ಪ್ರತಿವರ್ಷ ವರ್ಲ್ಡ್‌ ವೆಜಿಟೇರಿಯನ್‌ ಡೇ ಅಥವಾ ವಿಶ್ವ ಸಸ್ಯಾಹಾರಿಗಳ ದಿನವೆಂದು ಎಲ್ಲೆಡೆ ಆಚರಿಸಲಾಗುತ್ತದೆ. ಸಸ್ಯಾಹಾರದ ಮಹತ್ವ, ಅದರ ಅಗತ್ಯತೆ ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಸಸ್ಯಾಹಾರಿ ಜೀವನ ಶೈಲಿಯನ್ನು ಅನುಸರಿಸಲು ಜನರನ್ನು ಪ್ರೋತ್ಸಾಹಿಸಲು ವಿಶ್ವ ಸಸ್ಯಾಹಾರಿ ದಿನವನ್ನು ನವೆಂಬರ್ 1ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಸಸ್ಯಾಹಾರಿ ತಿಂಗಳ ಆರಂಭವನ್ನೂ ಸೂಚಿಸುತ್ತದೆ. ನವೆಂಬರ್ ತಿಂಗಳನ್ನು ಸಸ್ಯಾಹಾರಿ ತಿಂಗಳು ಎಂದು ಆಚರಿಸಲಾಗುತ್ತದೆ.
ಸಸ್ಯಾಹಾರಿ ಆಹಾರವು ಮಾನವನ ಆರೋಗ್ಯಕ್ಕೆ ಅನೇಕ ಪ್ರಯೋಜನವನ್ನು ನೀಡುತ್ತದೆ. ಪ್ರಾಣಿಗಳ ಯೋಗಕ್ಷೇಮವನ್ನು ರಕ್ಷಿಸುತ್ತದೆ ಮತ್ತು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಡೊನಾಲ್ಡ್ ವ್ಯಾಟ್ಸನ್ ಎಂಬವವರು 1 ನವೆಂಬರ್ 1944ರಂದು 5 ಜನರ ಸಭೆಯನ್ನು ಕರೆದು ಡೈರಿಯೇತರ ಸಸ್ಯಾಹಾರಿ ಆಹಾರ ಪದ್ಧತಿಗಳ ಕುರಿತು ಚರ್ಚಿಸಿದರು.ಸಸ್ಯಾಹಾರಿಗಳ ಜೀವನಶೈಲಿ ಮತ್ತು ಅವುಗಳ ಪ್ರಾಮುಖ್ಯತೆಯನ್ನು ಕೇಂದ್ರೀಕರಿಸಲು ಮತ್ತು ಉತ್ತೇಜಿಸಲು ಅವರು ಸಸ್ಯಾಹಾರಿ ಜೀವನಶೈಲಿ ಎಂದು ಕರೆಯಲ್ಪಡುವ ಹೊಸ ಆಂದೋಲನವನ್ನು ಸ್ಥಾಪಿಸಿದರು.ಬಳಿಕ ಅವರು ತಮ್ಮ ಸಸ್ಯಾಹಾರಿ ಆಹಾರದ ವ್ಯಾಖ್ಯಾನವನ್ನು ಸ್ಪಷ್ಟಪಡಿಸಿದರು. 1979ರಿಂದ ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸಲಾಗುತ್ತಿದೆ.

ಸಸ್ಯಾಹಾರಿ ಆಹಾರಗಳು ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿಂದ ಸಮೃದ್ಧವಾಗಿವೆಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಸಸ್ಯಾಹಾರಿ ಆಹಾರವು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ.ಆರೋಗ್ಯಕರ ದೇಹದ ತೂಕದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡುತ್ತದೆ.ಇದು ಟೈಪ್ 2 ಡಯಾಬಿಟಿಸ್ ತಡೆಗಟ್ಟಲು ಸಹಾಯ ಮಾಡುತ್ತದೆ.ಸಸ್ಯಾಹಾರ ತಿನ್ನುವುದರಿಂದ ಸಂಧಿವಾತದ ನೋವು ಕಡಿಮೆಯಾಗುತ್ತದೆ.ಸಸ್ಯ ಆಧಾರಿತ ಆಹಾರವು ಸಂಪೂರ್ಣ ಪ್ರೋಟೀನನ್ನು ಸುಲಭವಾಗಿ ಒದಗಿಸುತ್ತದೆ.ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.ಸರಾಸರಿ 16% ವೇಗವಾಗಿ ಕ್ಯಾಲೊರಿಗಳನ್ನು ಸುಡುತ್ತದೆ.
ಮನುಷ್ಯರು ಮತ್ತು ಪ್ರಾಣಿಗಳಿಗೆ ಸಸ್ಯಾಹಾರದಿಂದ ಆಗುವ ಪ್ರಯೋಜನಗಳು:ಪ್ರತಿ ಸಸ್ಯಾಹಾರಿಗಳು ವರ್ಷಕ್ಕೆ ಸರಾಸರಿ 30 ಪ್ರಾಣಿಗಳನ್ನು ಉಳಿಸುತ್ತಾರೆ. ಆಹಾರ ಉದ್ಯಮದಲ್ಲಿ ಪ್ರಾಣಿಗಳ ಹತ್ಯೆಯನ್ನು ಸಸ್ಯಾಹಾರಿಗಳು ಕಡಿತಗೊಳಿಸುತ್ತಾರೆ. ಸಸ್ಯಾಹಾರಿರಿಯಾಗುವ ಮೂಲಕ ನೀವು ಪ್ರಾಣಿಗಳನ್ನು ರಕ್ಷಿಸಬಹುದು.ಸಸ್ಯಾಹಾರಿಗಳು ಪರಿಸರಕ್ಕೆ ಅದ್ಭುತ ಕೊಡುಗೆ ನೀಡುತ್ತಾರೆ. ಅರಣ್ಯನಾಶ, ಹಸಿರುಮನೆ ಅನಿಲ ಹೊರಸೂಸುವಿಕೆ, ಮಾಲಿನ್ಯ ಮತ್ತು ನೀರಿನ ಕೊರತೆಯಾಗದಂತೆ ತಡೆಯುತ್ತಾರೆ.ಸಸ್ಯ ಆಧಾರಿತ ಆಹಾರವನ್ನು ಸೇವಿಸುವ ಮೂಲಕ ನೀವು ಹೆಚ್ಚು ಸುಸ್ಥಿರ ಜೀವನವನ್ನು ನಡೆಸಬಹುದಾಗಿದೆ.ಜಾನುವಾರುಗಳು ಮತ್ತು ಅವುಗಳ ಉಪಉತ್ಪನ್ನಗಳು ವಿಶ್ವಾದ್ಯಂತದ ಎಲ್ಲಾ ಹಸಿರುಮನೆ ಅನಿಲ ಹೊರಸೂಸುವಿಕೆಗಳಲ್ಲಿ 51% ನಷ್ಟಿದೆ. 1 ಪೌಂಡ್ ಗೋಮಾಂಸ ಉತ್ಪಾದಿಸಲು 2,500 ಗ್ಯಾಲನ್ ನೀರು ಅಗತ್ಯವಿದೆ. ಅಮೆಜಾನ್ ಮಳೆಕಾಡು ನಾಶಕ್ಕೆ 91% ವರೆಗೆ ಮಾಂಸಕ್ಕಾಗಿ ಪ್ರಾಣಿಗಳ ಸಾಕಣಿಕೆಯೇ ಕಾರಣ.

ಜನರು ತಮ್ಮ ಸಮುದಾಯ, ಪ್ರಾದೇಶಿಕತೆ, ಅಭಿರುಚಿ, ಆರೋಗ್ಯ ಕಾಳಜಿ, ಪೌಷ್ಟಿಕಾಂಶ ಇತ್ಯಾದಿಗಳನ್ನು ಪರಿಗಣಿಸಿ ಸಸ್ಯಾಹಾರ ಅಥವಾ ಮಾಂಸಾಹಾರಗಳನ್ನು ರೂಢಿಸಿಕೊಂಡಿದ್ದಾರೆ. ಇದು ಅವರ ಸ್ವಂತ ಆಯ್ಕೆ. ಈ ಎರಡೂ ಆಹಾರ ಪದ್ಧತಿಗಳನ್ನೂ ಒಪ್ಪಿಕೊಂಡಿರುವ ಜನರಿದ್ದಾರೆ. ಕೆಲವರು ಕೇವಲ ಸಸ್ಯಾಹಾರವನ್ನು ಅನುಸರಿಸಿದರೆ, ಇನ್ನು ಕೆಲವರು ಇವೆರಡನ್ನೂ ಅನುಕರಿಸುತ್ತಾರೆ. ಆದರೆ ಈಗ ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಒಳ್ಳೆಯದು ಎಂಬ ಕಾಳಜಿ ವ್ಯಕ್ತವಾಗಿದೆ. ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ವಹಿಸುತ್ತಿರುವ ಈಗಿನ ಪೀಳಿಗೆಯಲ್ಲಿ ಸಸ್ಯಾಹಾರ ಅತ್ಯಂತ ಪ್ರಿಯವಾದ ಆಹಾರ ಪದ್ಧತಿಯಾಗಿ ಹೊರ ಹೊಮ್ಮಿದೆ. ಪರಿಣಾಮ ಮಾಂಸಾಹಾರಿಗಳು ಕೂಡಾ ಮಾಂಸದ ಖಾದ್ಯಗಳನ್ನು ತ್ಯಜಿಸಿ ಸಂಪೂರ್ಣವಾಗಿ ಸಸ್ಯಾಹಾರದತ್ತ ಮುಖ ಮಾಡುತ್ತಿದ್ದಾರೆ. ಆಹಾರ ಮಾತ್ರವಲ್ಲ, ತಮ್ಮ ಜೀವನಶೈಲಿಯನ್ನೂ ಹಸಿರುಮಯವಾಗಿಸುತ್ತಿದ್ದಾರೆ.