ವಿಶ್ವ ಸಂಧಿವಾತ ದಿನ


ಈಗ ಮನುಷ್ಯನನ್ನು ಒಂದಲ್ಲ ಒಂದು ರೀತಿಯ ರೋಗಗಳು ಕಾಡುತ್ತಲೇ ಇರುತ್ತವೆ. ನಾವು ಎಷ್ಟೇ ಜಾಗರೂಕರಾಗಿದ್ದರೂ ಸಾಲದಾಗಿದೆ. ಅದರಲ್ಲೂ ಬಹಳಷ್ಟು ಮಂದಿ ಸಂಧಿವಾತದ ತೊಂದರೆಯಿಂದ ಬಳಲುತ್ತಿದ್ದು ಅದರಲ್ಲೂ ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸಂಧಿವಾತ ಕಾಣಿಸಿಕೊಂಡರೆ ಅದನ್ನು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಿಲ್ಲವಾದರೂ ಸೂಕ್ತ ಚಿಕಿತ್ಸೆ ನೀಡಿ ನಿಯಂತ್ರಿಸಬಹುದು ಎಂಬುದು ವೈದ್ಯರ ಅಭಿಪ್ರಾಯವಾಗಿದೆ.  ಸಂಧಿವಾತ ಎನ್ನುವುದು ಕೀಲುಗಳ ಉರಿಯೂತವಾಗಿದ್ದು, ಇದು ಬಾವು ಮತ್ತು ಗಡುಸಾಗುವಿಕೆಯಿಂದ ಕೂಡಿದ ಕೀಲು ನೋವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಆರಂಭದಿಂದಲೂ ನಿರ್ಲಕ್ಷಿಸದೆ ಬೇಗನೆ ಚಿಕಿತ್ಸೆ ನೀಡಿದರೆ ಉತ್ತಮ. ಇಲ್ಲದೆ ಹೋದರೆ ರೋಗಿಯನ್ನು ಇನ್ನಿಲ್ಲದಂತೆ ಕಾಡಬಹುದು.

ಹಾಗಾಗಿ ಸಂಧಿವಾತ ಮತ್ತು ಮಸ್ಕ್ಯುಲೋಸ್ಕೆಲಿಟಲ್ ರೋಗಗಳ ಅಸ್ತಿತ್ವ ಮತ್ತು ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 12 ರಂದು ವಿಶ್ವ ಸಂಧಿವಾತ ದಿನವನ್ನು  ಆಚರಿಸಲಾಗುತ್ತದೆ. ಸಂಧಿವಾತವು ಒಂದು ರೋಗವಲ್ಲ ಆದರೆ ಕೀಲುಗಳಿಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ರೋಗಗಳಿಗೆ ವಿಶಾಲವಾದ ಪದವಾಗಿದೆ. ಇದು ಜಂಟಿಯಾಗಿ ಅಥವಾ ಸುತ್ತಲೂ ಊತವನ್ನು ಉಂಟುಮಾಡಬಹುದು, ಇದರ ಪರಿಣಾಮವಾಗಿ ನೋವು, ಠೀವಿ ಮತ್ತು ಕೆಲವೊಮ್ಮೆ ಚಲಿಸಲು ಕಷ್ಟವಾಗುತ್ತದೆ.

ವಿಶ್ವ ಸಂಧಿವಾತ ದಿನವನ್ನು ಮೊದಲ ಬಾರಿಗೆ 1996 ರಲ್ಲಿ ಆಚರಿಸಲಾಯಿತು ಮತ್ತು ಈ ವರ್ಷ ಥೀಮ್ ವಿಳಂಬ ಮಾಡಬೇಡಿ, ಇಂದು ಸಂಪರ್ಕಿಸಿ: Time2Work. ಈ ದಿನವು ಎಲ್ಲ ಸಮುದಾಯಗಳಿಗೆ, ಎಲ್ಲೆಡೆ, ಒಟ್ಟಾಗಿ ಸೇರಲು ಮತ್ತು ಎಲ್ಲಾ ಪ್ರೇಕ್ಷಕರಿಗೆ ಹೆಚ್ಚು ಅಗತ್ಯವಾದ ಸಂದೇಶವನ್ನು ತರಲು ಸಹಾಯ ಮಾಡುವ ಸಾಮಾನ್ಯ ಧ್ವನಿಯನ್ನು ಕಂಡುಕೊಳ್ಳುವ ಅವಕಾಶವನ್ನು ಒದಗಿಸುತ್ತದೆ.ಈ ದಿನದಂದು ಸಂಧಿವಾತದ ಸುತ್ತ ಅಭಿಯಾನಗಳನ್ನು ಪ್ರಾರಂಭಿಸಲಾಗುತ್ತದೆ ಮತ್ತು ಸಮಯೋಚಿತ ರೋಗನಿರ್ಣಯ ಮತ್ತು ನಿರ್ವಹಣಾ ತಂತ್ರಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. EULAR (ಯೂರೋಪಿಯನ್ ಅಲೈಯನ್ಸ್ ಆಫ್ ಅಸೋಸಿಯೇಷನ್ಸ್ ಫಾರ್ ರೂಮಟಾಲಜಿ) ಪ್ರಕಾರ, ಅಂದಾಜು ಒಂದು ನೂರು ಮಿಲಿಯನ್ ಜನರು ರೋಗನಿರ್ಣಯ ಮಾಡದ ಮತ್ತು ರೋಗಲಕ್ಷಣಗಳನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಪಂಚದ ಹೆಚ್ಚಿನ ಜನಸಂಖ್ಯೆಯು ಸಂಧಿವಾತದಿಂದ ಪ್ರಭಾವಿತವಾಗಿದೆ, ಅದು ಅವರ ಜೀವನದ ಗುಣಮಟ್ಟ ಮತ್ತು ಸಮಾಜದಲ್ಲಿ ಭಾಗವಹಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಅನೇಕ ವಿಧದ ಸಂಧಿವಾತಗಳಿದ್ದರೂ, ಸಾಮಾನ್ಯವಾದವುಗಳು ಅಸ್ಥಿಸಂಧಿವಾತ (OA) ಮತ್ತು ರುಮಟಾಯ್ಡ್ ಸಂಧಿವಾತ (RA).

ಸಂಧಿವಾತ’ ಎನ್ನುವ ಪದವನ್ನು ದೇಹದ ಕೀಲು ಅಥವಾ ಸಂದುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ರೋಗಗಳನ್ನು ಹೆಸರಿಸಲು ಉಪಯೋಗಿಸಲಾಗುತ್ತದೆ. ಸಂಧಿವಾತದಲ್ಲಿ ಸಾಮಾನ್ಯವಾಗಿ ಎರಡು ರೀತಿ ಕಂಡುಬರುತ್ತದೆ. ಒಂದು ಕೀಲುಗಳಲ್ಲಿ ಮೂಳೆಗಳು ಕ್ಷೀಣಗೊಳ್ಳು ಸಂಧಿವಾತ, ಇನ್ನೊಂದು ಕೀಲುಗಳಲ್ಲಿ ಊರಿಯೂತ, ಸಹಜವಾಗಿ ಬಾಗಲು, ಕುಳಿತುಕೊಳ್ಳಲು ಕಷ್ಟವಾಗುವಂತಹ ಅಸಹಜ ಸ್ಥಿತಿ.

ಇವೆರಡಲ್ಲದೆ ದೇಹ ದುರ್ಬಲವಾಗಿದ್ದರಂತೂ ಅನೇಕ ತೊಂದರೆಗಳು ಉಂಟಾಗುತ್ತವೆ. ವ್ಯಕ್ತಿಯ ಶಕ್ತಿಗುಂದಿಸಿ ದಿನಚರಿಯನ್ನೇ ಹಾಳು ಮಾಡುತ್ತವೆ. ಕ್ಷೀಣಗೊಳ್ಳುವ ಸಂಧಿವಾತದಲ್ಲಿ ಯಾವುದೇ ಜ್ವರ, ತೂಕದ ನಷ್ಟ ಕಂಡುಬರುವುದಿಲ್ಲ. ದೇಹದ ಕೀಲುಗಳಲ್ಲಿ ಯಾವುದೇ ವಿರೂಪತೆ ಇಲ್ಲದೆ ಮೂಳೆಗಳು ಭದ್ರವಾಗಿ, ಗಟ್ಟಿಯಾಗಿಯೇ ಇರುತ್ತವೆ. ದೇಹದ ಬೇರೆ ಭಾಗದಲ್ಲಿ ನೋವಾಗಲಿ, ಊತವಾಗಲಿ ಇರುವುದಿಲ್ಲ. ಮೂಳೆಗಳು ಒಂದಕ್ಕೊಂದು ತಾಗದಂತೆ ನೋಡಿಕೊಳ್ಳುವ ಕಾರ್ಟಿಲೇಜ್ ಎಂಬ ಅಂಶ ನಲವತ್ತು ವರ್ಷಗಳ ನಂತರ ಕಡಿಮೆಯಾಗುವುದರಿಂದ ಮೂಳೆಯ ಮೇಲ್ಮೈಗಳು ಪರಸ್ಪರ ಸಂಪರ್ಕಕ್ಕೆ ಬಂದು ಸಂಧಿವಾತ ಶುರುವಾಗುತ್ತದೆ. ನೇರವಾಗಿದ್ದಾಗ ಅಥವಾ ಚಲಿಸುವಾಗ ಬೆರಳುಗಳ ಕೊನೆಯಲ್ಲಿ ಒಂದೋ ಬಿಗಿತ ಅಥವಾ ನೋವು ಕಂಡುಬರುವುದು ಇದರ ಮೊದಲ ಲಕ್ಷಣ. ಮಂಡಿಯಲ್ಲಿ ಸದಾ ನೋವಿರುವುದು ಸಾಮಾನ್ಯ. ಸೂಕ್ತ ಚಿಕಿತ್ಸೆ ನೀಡಿದರೆ ವರ್ಷ / ಎರಡು ವರ್ಷದಲ್ಲಿ ಇದು ಸುಧಾರಿಸುತ್ತದೆ. ಕೀಲುಗಳಲ್ಲಿ ಊರಿಯೂತ ಕಂಡುಬರುವ ಇನ್ನೊಂದು ಸಂಧಿ ಶೇಕಡ 20 ಜನರಲ್ಲಿ ಕಂಡುಬರುತ್ತದೆ. ಇಲ್ಲಿ ಕೀಲುಗಳಲ್ಲ್ಲಿ ಬಾವು ಕಂಡುಬರುತ್ತದೆ.

ಮೂಳೆಗಳ ಮಧ್ಯದ ಪೊರೆ ಹಿಗ್ಗುವ ಪರಿಣಾಮ ಕಾರ್ಟಿಲೇಜ್ ಕೆಳಗೆ ಸರಿದು ಇದು ಉಂಟಾಗುತ್ತದೆ. ಅದೇ ಸಮಯದಲ್ಲಿ ಕಾರ್ಟಿಲೇಜ್ ಕೆಳಭಾಗದ ಮೂಳೆಯನ್ನು ಸರಿಸಲು ಅಥವಾ ಸವೆಸಲು ಪ್ರಾರಂಭಿಸುತ್ತದೆ. ಮತ್ತು ಮೂಳೆಗಳು ಕಬ್ಬಿಣದ ಅಂಶವನ್ನು ಕಳೆದುಕೊಳ್ಳುತ್ತವೆ. ಸಂದುಗಳನ್ನು ಬಾಗಿಸಲಾಗದೆ ನೇರವಾಗಿಯೇ ಉಳಿಯುವಂತಹ ಸ್ಥಿತಿ ಇಲ್ಲಿರುತ್ತದೆ. ನಡೆದಾಡುವುದೂ ಕಷ್ಟವಾಗುವ ಸಾಧ್ಯತೆ ಇಲ್ಲಿ ಹೆಚ್ಚು. ಈ ಸಂಧಿವಾತ ಬರಲು ಕಾರಣವೇನು ಎನ್ನುವುದನ್ನು ಕಂಡುಕೊಳ್ಳಲು ವೈದ್ಯಕೀಯ ಲೋಕ ಪ್ರಯೋಗ ನಡೆಸುತ್ತಲೇ ಇದೆ. ಈಗಿರುವ ಸಿದ್ಧಾಂತಗಳ ಪ್ರಕಾರ ಇದು ಸೋಂಕಿನಿಂದ ಬರುವ ರೋಗ ಎನ್ನುತ್ತಾರೆ ವಿಜ್ಞಾನಿಗಳು. ಇದರ ಪರಿಹಾರಕ್ಕಾಗಿ ನೀಡುವ ಔಷಧಗಳು ಅಲ್ಪ ಉಪಶಮನವನ್ನು ಮಾತ್ರ ನೀಡುತ್ತವೆ. ರೋಗಲಕ್ಷಣಗಳು ಮರುಕಳಿಸುತ್ತಲೇ ಇರುತ್ತವೆ ಮತ್ತು ಈ ಮೊದಲೇ ಹಾನಿಗೊಳಗಾದ ಅಂಗಾಂಶಗಳನ್ನು ದುರಸ್ತಿಗೊಳಿಸುವ ಔಷಧವಿಲ್ಲ.

ಸಂಧಿವಾತ  ಮತ್ತು ಮನುಷ್ಯನ ಆರ್ಥಿಕ ಪರಿಸ್ಥಿತಿಗೆ ನೇರ ಸಂಬಂಧವಿದೆ. ಆರ್ಥಿಕ ಸ್ಥಿತಿ ಹದಗೆಟ್ಟಾಗಲೆಲ್ಲ ಸಂಧಿವಾತ ಸಮಸ್ಯೆ ಕಾಡುವುದು ಸಂಶೋಧನೆಗಳಿಂದ ದೃಢಪಟ್ಟಿದೆ! ಆರ್ಥಿಕ ಪರಿಸ್ಥಿತಿ ಕೈಕೊಟ್ಟಾಗ ಮನಸ್ಸಿನಲ್ಲಿ ಆತಂಕ, ಒತ್ತಡ, ಅವಮಾನ, ನಿರಾಶೆಯ ಭಾವಗಳು ದಟ್ಟವಾಗಿ ಭಾವನಾತ್ಮಕ ನೋವುಗಳಾಗಿ  ’ಸಂಧಿ’ಗಳಲ್ಲಿ ಸಂಗ್ರಹಗೊಂಡು, ಭವಿಷ್ಯದ ಬಗ್ಗೆ ಚಿಂತಿತರನ್ನಾಗಿ ಮಾಡುವ ಈ ಸಂದರ್ಭದಲ್ಲಿ ಸಂಧಿವಾತ ಕಾಡುತ್ತದೆ!