ವಿಶ್ವ ಸಂಗೀತ ದಿನಾಚರಣೆ

ಕಲಬುರಗಿ,ಜೂ.23-ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲಯದ ಹಿಂದೂಸ್ತಾನಿ ಸಂಗೀತ ವಿಭಾಗದ ವತಿಯಿಂದ ವಿಶ್ವ ಸಂಗೀತ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ತಾರಾ ಕುಲಕರ್ಣಿ ಗಾಯಕರು, ಮಹಾವಿದ್ಯಾಲಯದ ನಿವೃತ್ತ ಸಂಗೀತ ಪ್ರಾಧ್ಯಾಪಕರಾದ ತಾರಾ ಕುಕಲರ್ಣಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡ ವಹಿಸಿದ್ದರು. ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ರೇಣುಕಾ ಹಾಗರಗುಂಡಗಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳ ಪರಿಚಯ ಮಾಡಿಕೊಟ್ಟರು. ಸಂಗೀತ ವಿಭಾಗದ ಇನ್ನೊರ್ವ ಉಪನ್ಯಾಸಕ ಡಾ. ಮುಖಿಮ್ ಮಿಯಾ ಅವರು ಉಪಸ್ಥಿತರಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರಾದ ಕು. ಯಲ್ಲಮ್ಮ ಮತ್ತು ಸಂಗಡಿಗರ ವಚನ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದ ನಿರೂಪಣೆಯನ್ನು ಬಿ.ಎ.ಅಂತಿಮ ವರ್ಷದ ವಿದ್ಯಾರ್ಥಿನಿ ಕು. ಬಂಗಾರಮ್ಮ ಹಾಗೂ ಕು.ಪ್ರಜ್ಞಾ ಬಿಎಸ್ಸಿ ದ್ವಿತೀಯ ವರ್ಷದ ಸಂಗೀತ ವಿಷಯದ ಓಇ ವಿದ್ಯಾರ್ಥಿಗಳು ನಡೆಸಿಕೊಟ್ಟರು. ವಿಶ್ವ ಸಂಗೀತ ದಿನದ ಕುರಿತು ಕು.ಅಂಜಲಿ ಕುಮಾರಿ ಬಿಎ ನಾಲ್ಕನೇಯ ಸೆಮಿಸ್ಟರ ವಿದ್ಯಾರ್ಥಿ ಮಾತನಾಡಿದಳು.ಕಾರ್ಯಕ್ರಮದ ವಂದನಾರ್ಪಣೆ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಅನಿತಾ ಮಾಳಿ ನಡೆಸಿಕೊಟ್ಟಳು. ಈ ಕಾರ್ಯಕ್ರಮದಲ್ಲಿ ಡಾ. ಶಾಂತಾ ಮಠ, ಶಕುಂತಲಾ ಭದ್ರಶೆಟ್ಟಿ. ಡಾ. ಚಂದ್ರಕಲಾ ಪಾಟೀಲ್. ಡಾ ವೀಣಾ ಹೊನಗುಂಟಿಕರ್, ಡಾ.ಮಮತಾ ಮೆಳಕುಂದಿ, ಡಾ. ಮೀನಾಕ್ಷಿ ಬಾಳಿ ಸೇರಿದಂತೆ ಮಹಾವಿದ್ಯಾಲಯದ ಇನ್ನೂ ಅನೇಕ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.